ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮುಟ್ಟತ್ತೋಡಿ ಗ್ರಾಮದ ಅಲಂಪಾಡಿ ಸಿ.ಎಚ್. ನಗರ ನಿವಾಸಿ ಇಸ್ಮಾಯಿಲ್ ಎಂಬವರ ಕಾಡುತ್ತನ್ನಗಳ ಮಾರಾಟದಂಗಡಿಗೆ ನುಗ್ಗಿದ ಕಳ್ಳರು ಬಾರೀ ಪ್ರಮಾಣದ ಕಾಡುತ್ತನ್ನ ಕಳವುಗೈದಿರುವ ಬಗ್ಗೆ ವಿದ್ಯಾನಗರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಜೂನ್ 30ರಿಂದ ಜುಲೈ 1ರ ನಡುವಿನ ಕಾಲಾವಧಿಯಲ್ಲಿ ಕಳ್ಳರು ಅಂಗಡಿಯ ಬೀಗ ಒಡೆದು ನುಗ್ಗಿ, ಅಲ್ಲಿ ದಾಸ್ತಾನು ಇರಿಸಲಾಗಿದ್ದ 450 ಕಿಲೋ ಅಡಕೆ, 10 ಕಿಲೋ ಗೇರುಬೀಜ, ಅಂಗಡಿಯಲ್ಲಿ ಉಪ ಯೋಗಿಸುವ 10,000 ರೂ. ಮೌಲ್ಯದ ಡಿಜಿಟಲ್ ತಕ್ಕಡಿ ಸೇರಿದಂತೆ 224650 ರೂ. ಮೌಲ್ಯದ ಸಾಮಗ್ರಿ ಕಳವುಗೈದಿರುವುದಾಗಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ಇಸ್ಮಾಯಿಲ್ ತಿಳಿಸಿದ್ದಾರೆ.

