ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಮಾವುಂಗಾಲ್‍ನಲ್ಲಿ ದ್ವಿಚಕ್ರ ವಾಹನದಲ್ಲಿ ತಲುಪಿದ ತಂಡ, ಸ್ಕೂಟರ್‍ನಲ್ಲಿ ತೆರಳುತ್ತಿದ್ದ ಮಹಿಳೆಯನ್ನು ತಡೆದು, ಕತ್ತಿನಿಂದ ಮೂರು ಪವನ್‍ನ ಕರಿಮಣಿಸರ ಕಸಿದು ಪರಾರಿಯಾಗಿದೆ. ಮಾವುಂಗಾಲ್ ನೆಲ್ಲಿತ್ತರ ಕ್ಯಾಂಪ್ಕೋ ಸನಿಹದ ಫುಡ್ ಪ್ರೋಡಕ್ಸ್ ಸಂಸ್ಥೆ ನೌಕರೆ, ಪುಲಯನಡ್ಕ ನಿವಾಸಿ ರವಿ ಎಂಬವರ ಪತ್ನಿ ಕೆ.ಸಿಂಧು(42) ಚಿನ್ನ ಕಳೆದುಕೊಂಡವರು. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಿಂಧು ಅವರು ಮನೆಗೆ ತಲುಪುತ್ತಿದ್ದಂತೆ ಅವರ ಸ್ಕೂಟರ್‍ಗೆ ಇನ್ನೊಂದು ಸ್ಕೂಟರಲ್ಲಿ ಆಗಮಿಸಿದ ತಂಡ, ಅವರನ್ನು ತಳ್ಳಿ ಕೆಳಕ್ಕೆ ಬೀಳಿಸಿ ಕತ್ತಿನಿಂದ ಕರಿಮಣಿ ಸರವನ್ನು ಕಿತ್ತು ಪರಾರಿಯಾಗಿದೆ.
ತಕ್ಷಣ ಹೊಸದುರ್ಗ ಠಾಣೆ ಎ.ಎಸ್.ಐ ಕೆ. ದಿನೇಶ್ ನೇತೃತ್ವದ ಪೆÇಲೀಸ್ ತಂಡ ಆರೋಪಿಗಳ ಪತ್ತೆಗೆ ಹುಡುಕಾಟ ಆಂಭಿಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಗಳನ್ನು ಪೆÇಲೀಸರು ಸಂಗ್ರಹಿಸಿ ಪರಿಶೀಲಿಸುತ್ತಿದ್ದಾರೆ. ಘಟನೆ ಬಗ್ಗೆ ಪೆÇಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಜಿಲ್ಲೆಯಲ್ಲಿ ಮಾದಕದ್ರವ್ಯ ಮಾರಾಟ ಹೆಚ್ಚಾಗುತ್ತಿದ್ದಂತೆ, ಪಾದಚಾರಿ ಮಹಿಳೆಯರ ಚಿನ್ನದ ಸರ ಕಸಿಯುವ ಕೃತ್ಯಗಳೂ ಹೆಚ್ಚುತ್ತಿರುವುದು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.


