HEALTH TIPS

ಮೂರು ರಾಜ್ಯಗಳ ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ : ಜುಲೈ 30ರಂದು ಮತದಾನ

ನವದೆಹಲಿ: ಭಾರತೀಯ ಚುನಾವಣಾ ಆಯೋಗ (ಇಸಿಐ) ಬಿಹಾರ, ಗುಜರಾತ್ ಮತ್ತು ಮಧ್ಯಪ್ರದೇಶದ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ಸೋಮವಾರ ಉಪಚುನಾವಣೆ ಘೋಷಿಸಿದೆ. ಈ ಕ್ಷೇತ್ರಗಳಿಗೆ ಜುಲೈ 30ರಂದು ಮತದಾನ ನಡೆಯಲಿದೆ.

ಈ ಉಪ ಚುನಾವಣೆಗಳು ಬಿಹಾರದ ಬಾಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದತಿಯಾ ಕ್ಷೇತ್ರಗಳಿಗೆ ನಡೆಯಲಿವೆ.

ಚುನಾವಣಾ ಆಯೋಗ ಇದಕ್ಕೆ ಸಂಬಂಧಿಸಿದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಮೊದಲು ನಾಮಪತರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ನಾಮಪತ್ರ ಸಲ್ಲಿಸಲು ಜುಲೈ 13 ಕೊನೆಯ ದಿನಾಂಕವಾಗಿದೆ.

ಜುಲೈ 14ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಚುನಾವಣೆಯಿಂದ ಹಿಂದೆ ಸರಿಯಲು ಬಯಸುವ ಅಭ್ಯರ್ಥಿಗಳು ಜುಲೈ 16ರೊಳಗೆ ತಮ್ಮ ನಾಮಪತ್ರವನ್ನು ಹಿಂಪಡೆಯಬಹುದು. ಜುಲೈ 30ರಂದು ಮತದಾನ ನಡೆಯಲಿದೆ. ಇಡೀ ಚುನಾವಣಾ ಪ್ರಕ್ರಿಯೆ ಆಗಸ್ಟ್ 4ರಂದು ಪೂರ್ಣಗೊಳ್ಳಲಿದೆ ಎಂದು ಆಯೋಗ ತಿಳಿಸಿದೆ.

ಬಿಹಾರದ ಬಾಕಿಪುರ ಕ್ಷೇತ್ರದ ಹಾಲಿ ಶಾಸಕರಾಗಿದ್ದ ನಿತಿನ್ ನಬಿನ್ ಅವರು ಮಾರ್ಚ್ 30ರಂದು ರಾಜೀನಾಮೆ ನೀಡಿದ್ದರು. ಇದರಿಂದ ಅವರ ಸ್ಥಾನ ತೆರವಾಗಿದೆ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಉಪ ಚುನಾವಣೆ ಅನಿವಾರ್ಯವಾಗಿದೆ.

ಗುಜರಾತ್‌ನ ಮಂಜಲ್‌ಪುರ ಕ್ಷೇತ್ರದ ಶಾಸಕರಾಗಿದ್ದ ಯೋಗೇಶ್‌ಭಾಯಿ ನಾರಾಯಣದಾಸ್ ಪಟೇಲ್ ಅವರು ಜೂನ್ 2ರಂದು ನಿಧನರಾದರು. ಅವರ ನಿಧನದಿಂದಾಗಿ ಈ ಸ್ಥಾನ ತೆರವಾಗಿದೆ.

ಮತ್ತೊಂದೆಡೆ, ಮಧ್ಯಪ್ರದೇಶದಲ್ಲಿ ರಾಜೇಂದ್ರ ಭಾರತಿ ಅವರು ಎಪ್ರಿಲ್ 2ರಂದು ಅನರ್ಹಗೊಂಡಿದ್ದರಿಂದ ದತಿಯಾ ಸ್ಥಾನ ತೆರವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries