HEALTH TIPS

ನಾಗ್ಪುರ: 3 ಗಿಗಾ ವ್ಯಾಟ್ ಸೌರ ಸೆಲ್ ಉತ್ಪಾದನಾ ಘಟಕ ಆರಂಭಿಸಿದ ಅವಾಡಾ ಎಲೆಕ್ಟ್ರೋ

ನವದೆಹಲಿ: ಮಹಾರಾಷ್ಟ್ರದ ನಾಗ್ಪುರದಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ 3 ಗಿಗಾ ವ್ಯಾಟ್ ಸಾಮರ್ಥ್ಯದ ಸೌರ ಸೆಲ್ ಉತ್ಪಾದನಾ ಘಟಕವನ್ನು ಅವಾಡ ಎಲೆಕ್ಟ್ರೋ ಸಂಸ್ಥೆಯು ಸೋಮವಾರ (ಜುಲೈ13) ಕಾರ್ಯಾರಂಭಗೊಳಿಸಿದೆ. 


ಈ ಕಂಪನಿಯ 6 ಗಿಗಾ ವ್ಯಾಟ್ ಸಾಮರ್ಥ್ಯದ ಉನ್ನತ ದಕ್ಷತೆಯ ಎನ್-ಟೈಪ್ ಟೋಪ್‌ಕಾನ್ ಸೌರ ಸೆಲ್ ಉತ್ಪಾದನಾ ಯೋಜನೆಯ ಭಾಗವಾಗಿದೆ.

ಒಟ್ಟು 12 ಗಿಗಾ ವ್ಯಾಟ್ ಸೌರ ಸೆಲ್ ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸುವ ಗುರಿಯೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ನಾಗ್ಪುರದ ಬುಟಿಬೋರಿಯಲ್ಲಿರುವ ಸಮಗ್ರ ಸೌರ ಉತ್ಪಾದನಾ ಘಟಕದಲ್ಲಿ ಮೊದಲ 3 ಗಿಗಾ ವ್ಯಾಟ್ ಉತ್ಪಾದನಾ ಲೈನ್ ಕಾರ್ಯಾರಂಭಗೊಂಡಿದ್ದು, ಉಳಿದ 3 ಗಿಗಾ ವ್ಯಾಟ್ ಸಾಮರ್ಥ್ಯವನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.

ಪ್ರಸ್ತುತ ಅವಾಡ ಎಲೆಕ್ಟ್ರೋ ನಾಗ್ಪುರ ಮ‌ತ್ತು ಉತ್ತರ ಪ್ರದೇಶದ ದಾದ್ರಿಯಾದಲ್ಲಿರುವ ಘಟಕಗಳಲ್ಲಿ ಒಟ್ಟು 8.50 ಗಿಗಾ ವ್ಯಾಟ್ ಸಾಮರ್ಥ್ಯದ ಎನ್-ಟೈಪ್ ಟೋಪ್‌ಕಾನ್ ಗ್ಲಾಸ್ ಸೌರ ಮೊಡ್ಯೂಲ್‌ಗಳನ್ನು ಉತ್ಪಾದಿಸುತ್ತಿದೆ. ಇದಕ್ಕೆ ಇನ್ನೂ 5.10 ಗಿಗಾ ವ್ಯಾಟ್ ಸಾಮರ್ಥ್ಯವನ್ನು ಸೇರಿಸಿ ಒಟ್ಟು 13.60 ಗಿಗಾ ವ್ಯಾಟ್ ಮೊಡ್ಯೂಲ್‌ಗಳು ಉತ್ಪಾದನಾ ಸಾಮರ್ಥ್ಯ ತಲುಪುವ ಯೋಜನೆ ಹೊಂದಿದೆ.

ಇದರ ಜೊತೆಗೆ ಗ್ರೇಟರ್ ನೋಯ್ಡಾದಲ್ಲಿ ಮತ್ತೊಂದು 6 ಗಿಗಾ ವ್ಯಾಟ್ ಸೌರ ಸೆಲ್ ಉತ್ಪಾದನಾ ಘಟಕವನ್ನು ಸ್ಥಾಪಿಸುವ ಕಾರ್ಯವೂ ಪ್ರಗತಿಯಲ್ಲಿದ್ದು, ಇದರಿಂದ ಕಂಪನಿಯ ಒಟ್ಟು ಸೌರ ಸೆಲ್ ಉತ್ಪಾದನಾ ಸಾಮರ್ಥ್ಯವನ್ನು 12 ಗಿಗಾ ವ್ಯಾಟ್‌ಗೆ ಏರಲಿದೆ.

ಅಲ್ಲದೆ, ಯೋಜನೆಯಡಿ ನಾಗ್ಪುರದಲ್ಲಿ 3 ಗಿಗಾ ವ್ಯಾಟ್ ಸಾಮರ್ಥ್ಯದ ಇಂಗೋಟ್ ಮತ್ತು ವೇಫರ್ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆಯನ್ನು ಕಂಪನಿ ಪ್ರಕಟಿಸಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries