HEALTH TIPS

ವೆನೆಜುವೆಲಾದಲ್ಲಿ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ 4,333ಕ್ಕೆ ಏರಿಕೆ

 ಕಾರಕಸ್:‌ ವೆನೆಜುವೆಲಾದಲ್ಲಿ ಜೂನ್‌ 24ರಂದು ಸಂಭವಿಸಿದ ಅವಳಿ ಭೂಕಂಪದಿಂದಾಗಿ ಮೃತಪಟ್ಟವರ ಸಂಖ್ಯೆ 4,333ಕ್ಕೆ ಏರಿದೆ. ಮೃತರ ಪೈಕಿ 315 ಜನರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ನ್ಯಾಷನಲ್‌ ಅಸೆಂಬ್ಲಿ ಅಧ್ಯಕ್ಷ ಜಾರ್ಜ್‌ ರೋಡ್ರಿಗಸ್‌ ತಿಳಿಸಿದ್ದಾರೆ. ದುರಂತದ ವೇಳೆ 6,462 ಜನರನ್ನು ರಕ್ಷಿಸಲಾಗಿದೆ. 


ಗಾಯಾಳುಗಳ ಸಂಖ್ಯೆ 16,740ಕ್ಕೆ ತಲುಪಿದೆ ಎಂದಿರುವ ಅವರು, ನೆಲೆ ಕಳೆದುಕೊಂಡಿರುವವರಿಗೆ ವಸತಿ ವಿತರಣಾ ಕಾರ್ಯಕ್ರಮ ಇನ್ನೊಂದು ವಾರದಲ್ಲಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಭೂಕಂಪದ ವೇಳೆ ಸುಮಾರು 856 ಕಟ್ಟಡಗಳಿಗೆ ಹಾನಿಯಾಗಿದೆ. ಅದರಲ್ಲಿ, 190 ಕಟ್ಟಡಗಳು ಸಂಪೂರ್ಣ ಕುಸಿದಿವೆ. ಸರ್ಕಾರದ ಅಂದಾಜಿನ ಪ್ರಕಾರ ಸುಮಾರು 25,000 ಮನೆಗಳು ಬೇಕಾಗಿವೆ. ಅಧಿಕಾರಿಗಳು ವಸತಿ ಯೋಜನೆಗಳಿಗಾಗಿ ಓಸ್ಮಾ ಮತ್ತು ಚುಸ್ಪಾದಲ್ಲಿ 584,000 ಚದರ ಮೀಟರ್ ವಿಸ್ತೀರ್ಣದ ಸುಮಾರು 40 ನಿವೇಶನಗಳನ್ನು ಗುರುತಿಸಿದ್ದಾರೆ ಎಂದು ವಿವರಿಸಿದ್ದಾರೆ.

ದೇಶದ ಹಂಗಾಮಿ ಅಧ್ಯಕ್ಷೆಯಾಗಿರುವ ಡೆಲ್ಸಿ ರೊಡ್ರಿಗಸ್ ಅವರು ಮುಂದಿನ ವಾರ ಮೊದಲ ಹಂತದಲ್ಲಿ 200 ಮನೆಗಳನ್ನು ಹಂಚಿಕೆ ಮಾಡಲಿದ್ದಾರೆ ಎಂದು ಹೇಳಿರುವ ಜಾರ್ಜ್‌, ಅದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರ ಬಹಿರಂಗಪಡಿಸಿಲ್ಲ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries