HEALTH TIPS

ನೀಟ್‌: ಪ್ರಶ್ನೆಪತ್ರಿಕೆ ಪಡೆಯಲು ₹5 ಲಕ್ಷ ಪಾವತಿ

 ನವದೆಹಲಿ (PTI): 'ನೀಟ್‌-ಯುಜಿ' ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ, ಲಾತೂರ್‌ನ ಕೋಚಿಂಗ್‌ ಸೆಂಟರ್‌ನ ಮಾಲೀಕ ಶಿವರಾಜ್‌ ರಘುನಾಥ್‌ ಮೋಟೆಗಾಂವ್ಕರ್‌, ರಸಾಯನ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆಯನ್ನು ಪಡೆಯಲು ಪ್ರಾಧ್ಯಾ‍ಪಕ ಪಿ.ವಿ ಕುಲಕರ್ಣಿಗೆ ₹5 ಲಕ್ಷ ಪಾವತಿಸಿದ್ದರು ಎಂದು ಸಿಬಿಐ ಆರೋಪಿಸಿದೆ. 


ಜಾಮೀನು ಕೋರಿ ಮೋಟೆಗಾಂವ್ಕರ್‌ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಸಲ್ಲಿಸುವ ವೇಳೆ ಸಿಬಿಐ ಈ ವಿಚಾರ ತಿಳಿಸಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಪಿ.ವಿ.ಕುಲಕರ್ಣಿ ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್‌ಟಿಎ) ಪ್ರಶ್ನೆ ಪತ್ರಿಕೆ ತಯಾರಿಕೆ ಸಮಿತಿಯಲ್ಲಿದ್ದರು. ಅವರು ನಡೆಸುತ್ತಿದ್ದ ಕೋಚಿಂಗ್‌ ತರಗತಿಯಲ್ಲಿ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಲಾಗಿದ್ದು, ಮೋಟೆಗಾಂವ್ಕರ್‌ ಅವರ ಪುತ್ರನೂ ಅಲ್ಲಿಯೇ ತರಬೇತಿ ಪಡೆಯುತ್ತಿದ್ದ ಎಂದೂ ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

ಅಲ್ಲದೇ, ₹5 ಲಕ್ಷ ನೀಡಿ ಪಿ.ವಿ.ಕುಲಕರ್ಣಿ ಅವರಿಂದ ಪ್ರಶ್ನೆ ಪತ್ರಿಕೆ ಪಡೆದು, ಅವುಗಳನ್ನು ಮೋಟೆಗಾಂವ್ಕರ್‌ ಅವರು ಕೈಬರಹದ ನೋಟ್ಸ್‌ಗಳನ್ನಾಗಿ ತಯಾರಿಸಿದ್ದರು. ಅವರ ಫೋನ್‌ನಿಂದ 36 ಫೋಟೋಗಳನ್ನು ಸಂಗ್ರಹಿಸಲಾಗಿದ್ದು, ಅವುಗಳಲ್ಲಿ 132 ಕೈಬರಹದ ಪ್ರಶ್ನೆಗಳೂ ಪತ್ತೆಯಾಗಿವೆ ಎಂದು ಸಿಬಿಐ ಆರೋಪಿಸಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಪಿತೂರಿಯಲ್ಲಿ ಮೋಟೆಗಾಂವ್ಕರ್‌ ಕೂಡ ಪಾಲುದಾರ, ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿದ ಹಾಗೂ ಹಂಚಿದ ತಂಡದಲ್ಲಿ‍ ಕೂಡ ಅವರು ಸಕ್ರಿಯ ಸದಸ್ಯರಾಗಿದ್ದರು ಎಂದೂ ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries