HEALTH TIPS

ಅಡುಗೆ ಕೋಣೆಯತ್ತ ಎಥನಾಲ್ ಹೆಜ್ಜೆ; ATM ಸ್ಥಾಪನೆಗೆ ಕೇಂದ್ರದ ಚಿಂತನೆ!

ನವದೆಹಲಿ:  ವಾಹನಗಳಿಗೆ ಎಥನಾಲ್ ಮಿಶ್ರಿತ ಇ20 ಪೆಟ್ರೋಲ್‌ ಅನ್ನು ದೇಶಾದ್ಯಂತ ಯಶಸ್ವಿಯಾಗಿ ಪರಿಚಯಿಸಿರುವ ಕೇಂದ್ರ ಸರ್ಕಾರ, ಇದೀಗ ಎಥನಾಲ್ ಬಳಕೆಯನ್ನು ಅಡುಗೆ ಕೋಣೆಗಳಿಗೂ ವಿಸ್ತರಿಸುವತ್ತ ಚಿಂತನೆ ನಡೆಸಿದೆ. ಗೃಹೋಪಯೋಗಿ ಅಡುಗೆ ಒಲೆಗಳಿಗೆ ಬಳಸುವ ಎಥನಾಲ್ ಇಂಧನವನ್ನು ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಗ್ರಾಹಕರು ಖರೀದಿಸಲು ಅನುಕೂಲವಾಗುವಂತೆ ವಿಶೇಷ ಎಥನಾಲ್ಖಿ ATM ATM ಗಳನ್ನು ಸ್ಥಾಪಿಸುವ ಕುರಿತು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ ಎಂದು The Economic Times ವರದಿ ಮಾಡಿದೆ. 


ಈ ಉದ್ದೇಶಕ್ಕಾಗಿ ಅಡುಗೆ ಬಳಕೆಯ ಎಥನಾಲ್‌ ಗೆ ಸಂಬಂಧಿಸಿದ ನೀತಿ ಚೌಕಟ್ಟನ್ನು ರೂಪಿಸುವ ಕೆಲಸ ನಡೆಯುತ್ತಿದೆ. ಈ ಪ್ರಸ್ತಾವ ಇನ್ನೂ ಆರಂಭಿಕ ಹಂತದಲ್ಲಿದ್ದರೂ, ಭಾರತದ ಜೈವಿಕ ಇಂಧನ ಕಾರ್ಯತಂತ್ರದಲ್ಲಿ ಮಹತ್ವದ ಬದಲಾವಣೆಗೆ ಇದು ಮುನ್ನುಡಿಯಾಗುವ ಸಾಧ್ಯತೆ ಇದೆ.

ಭಾರತ ಈಗಾಗಲೇ ನಿಗದಿತ ವೇಳಾಪಟ್ಟಿಗಿಂತ ಮುಂಚೆಯೇ ದೇಶಾದ್ಯಂತ ಇ20 ಪೆಟ್ರೋಲ್‌ ಪರಿಚಯಿಸುವಲ್ಲಿ ಯಶಸ್ಸು ಸಾಧಿಸಿದೆ. ಇದರ ಬೆನ್ನಲ್ಲೇ ಎಥನಾಲ್ ಬಳಕೆಯನ್ನು ಹೊಸ ಕ್ಷೇತ್ರಗಳಿಗೆ ವಿಸ್ತರಿಸುವ ಪ್ರಯತ್ನಗಳು ವೇಗ ಪಡೆದಿವೆ. ಈ ಕಾರ್ಯತಂತ್ರದ ಭಾಗವಾಗಿ ಅಡುಗೆ ಇಂಧನ, ಎಥನಾಲ್‌ ಗೆ ಹೊಂದಿಕೊಳ್ಳುವ ಇಂಧನ ಚಾಲಿತ ವಾಹನಗಳು, ಸುಸ್ಥಿರ ವಿಮಾನ ಇಂಧನ ಹಾಗೂ ರಫ್ತು ಕ್ಷೇತ್ರಗಳಿಗೂ ಆದ್ಯತೆ ನೀಡಲಾಗುತ್ತಿದೆ.

ಈ ಎಲ್ಲ ಉಪಕ್ರಮಗಳ ಪರಿಣಾಮವಾಗಿ ದೇಶದಲ್ಲಿ ಎಥನಾಲ್ ಉತ್ಪಾದನಾ ಸಾಮರ್ಥ್ಯ ಗಮನಾರ್ಹವಾಗಿ ಹೆಚ್ಚಿದೆ. ಭವಿಷ್ಯದಲ್ಲಿ ಎಥನಾಲ್‌ ಗೆ ಬೇಡಿಕೆ ವೇಗವಾಗಿ ಹೆಚ್ಚುವ ನಿರೀಕ್ಷೆಯಿದ್ದರೂ, ಸದ್ಯದ ಬೇಡಿಕೆಯನ್ನು ಮೀರುವಷ್ಟು ಉತ್ಪಾದನಾ ಸಾಮರ್ಥ್ಯ ದೇಶದಲ್ಲಿ ನಿರ್ಮಾಣವಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎಥನಾಲ್ ಮಿಶ್ರಿತ ಪೆಟ್ರೋಲ್‌ ಯೋಜನೆಯಿಂದ ಕೇವಲ ಒಂದು ದಶಕದ ಹಿಂದೆ ಶೇ. 1.5ರಷ್ಟಿದ್ದ ಎಥನಾಲ್ ಮಿಶ್ರಣ ಪ್ರಮಾಣ ಈಗ ಶೇ. 20ಕ್ಕೆ ಏರಿಕೆಯಾಗಿದೆ.

2014-15ನೇ ಸಾಲಿನಿಂದ ಇದುವರೆಗೆ ಎಥನಾಲ್ ಮಿಶ್ರಿತ ಪೆಟ್ರೋಲ್‌ ಯೋಜನೆಯಿಂದ ಸುಮಾರು 1.4 ಲಕ್ಷ ಕೋಟಿ ರೂ. ವಿದೇಶಿ ವಿನಿಮಯ ಉಳಿತಾಯವಾಗಿದೆ. ಇದೇ ಅವಧಿಯಲ್ಲಿ ರೈತರು ಹಾಗೂ ಮದ್ಯ ತಯಾರಿಕಾ ಕಂಪೆನಿಗಳಿಗೆ ಹೆಚ್ಚುವರಿ ಆದಾಯವೂ ಲಭಿಸಿದೆ.

ಈ ಹಿನ್ನೆಲೆಯಲ್ಲಿ ಈಗ ಕೇಂದ್ರ ಸರ್ಕಾರದ ಗಮನ ಗೃಹೋಪಯೋಗಿ ಇಂಧನ ಕ್ಷೇತ್ರದತ್ತ ನೆಟ್ಟಿದೆ. ಭಾರತ ಗೃಹೋಪಯೋಗಿ ಅನಿಲಕ್ಕಾಗಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಐPಉ ಆಮದಿನ ಮೇಲೆ ಅವಲಂಬಿತವಾಗಿದೆ. ದೇಶೀಯ ಉತ್ಪಾದನೆ ಹೆಚ್ಚಾಗಿದ್ದರೂ, ಗೃಹೋಪಯೋಗಿ ಬೇಡಿಕೆಯನ್ನು ಪೂರೈಸಲು LPG ಆಮದು ಪ್ರಮಾಣವೂ ಏರಿಕೆಯಾಗುತ್ತಲೇ ಇದೆ.

ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತಗಳು ದೇಶದ ಆಮದು ವೆಚ್ಚ ಹಾಗೂ ಸರ್ಕಾರದ ಸಹಾಯಧನದ ಮೇಲೂ ನೇರ ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆಯಲ್ಲಿ ತನ್ನ ಮಹತ್ವಾಕಾಂಕ್ಷಿ ಎಥನಾಲ್ ನೀತಿಯನ್ನು ಅಡುಗೆ ಇಂಧನ ಕ್ಷೇತ್ರಕ್ಕೂ ವಿಸ್ತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಯೋಜನೆ ಜಾರಿಯಾದರೆ, ಗೃಹೋಪಯೋಗಿ ಬಳಕೆಗಾಗಿ ಗ್ರಾಹಕರು ಚಿಲ್ಲರೆ ಮಾರಾಟ ಕೇಂದ್ರಗಳಲ್ಲಿ ಸ್ಥಾಪನೆಯಾಗುವ ವಿಶೇಷ ಎಥನಾಲ್ಖಿ ATMಗಳ ಮೂಲಕ ಎಥನಾಲ್ ಇಂಧನ ಖರೀದಿಸಲು ಅವಕಾಶ ದೊರೆಯಲಿದೆ. ಈ ಪ್ರಸ್ತಾವ ಇನ್ನೂ ನೀತಿ ರೂಪಿಸುವ ಹಂತದಲ್ಲಿದ್ದು, ಭಾರತದ ಜೈವಿಕ ಇಂಧನ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries