ಈ ಆಟದ ಬಗ್ಗೆ ಅರಿವು ಮೂಡಿಸಿ, ಹೆಚ್ಚಿನವರ ಈ ಆಟದಲ್ಲಿ ಆಸಕ್ತಿ ವಹಿಸುವಂತೆ ಪ್ರೋತ್ಸಾಹಿಸಲು ಪ್ರತಿ ವರ್ಷ ಜುಲೈ 20 ರಂದು ಅಂತಾರಾಷ್ಟ್ರೀಯ ಚೆಸ್ ದಿನವನ್ನು ಆಚರಿಸಲಾಗುತ್ತಿದೆ.
ಅಂತಾರಾಷ್ಟ್ರೀಯ ಚೆಸ್ ದಿನದ ಇತಿಹಾಸವೇನು?
1924 ಜುಲೈ 20 ರಂದು ಫ್ರಾನ್ಸ್ನ ಪ್ಯಾರಿಸ್ ನಗರದಲ್ಲಿ ನಡೆದ ಎಂಟನೇ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟದಲ್ಲಿ 'ವಿಶ್ವ ಚೆಸ್ ಫೌಂಡೇಷನನ್ನು ಸ್ಥಾಪಿಸಲಾಯಿತು. ಇದರ ಸ್ಥಾಪನೆಯ ಗೌರವಾರ್ಥವಾಗಿ ಜುಲೈ 20 ರಂದು ವಿಶ್ವ ಚೆಸ್ ದಿನವನ್ನು ಆಚರಿಸಲು ನಿರ್ಧರಿಸಿತು. ಜುಲೈ 20, 1966 ರಂದು ಮೊದಲ ಬಾರಿಗೆ ವಿಶ್ವ ಚೆಸ್ ದಿನವನ್ನು ಆಚರಿಸಲಾಯಿತು. ಇದಾದ ಸುಮಾರು ವರ್ಷಗಳ ಬಳಿಕ ಅಂದರೆ 2019ರ ಡಿಸೆಂಬರ್ 12ನೇ ತಾರೀಕಿನಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಜುಲೈ 20 ರಂದು ವಿಶ್ವ ಚೆಸ್ ದಿನವೆಂದು ಅಧೀಕೃತವಾಗಿ ಘೋಷಿಸಿತು. ಅಂದಿನಿಂದ ಅಂತಾರಾಷ್ಟ್ರೀಯ ಚೆಸ್ ದಿನದ ಆಚರಣೆ ಚಾಲ್ತಿಯಲ್ಲಿದೆ.
ಅಂತಾರಾಷ್ಟ್ರೀಯ ಚೆಸ್ ದಿನದ ಮಹತ್ವ ಹಾಗೂ ಆಚರಣೆ ಹೇಗೆ?
ಚೆಸ್ ಬುದ್ಧಿವಂತಿಕೆಯ ಆಟವಾಗಿದ್ದು, ಮಕ್ಕಳನ್ನು ಚೆಸ್ ಆಟ ಆಡುವತ್ತ ಪ್ರೇರೆಪಿಸುವುದಾಗಿದೆ. ಈ ದಿನವು ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ನ್ನು ಉತ್ತೇಜಿಸುವುದು ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ ಹಾಗೂ ಚೆಸ್ ಆಟದ ಬಗ್ಗೆ ಜನರಿಗೆ ಅರಿವು ಮೂಡಿಸುವುದಾಗಿದೆ. ಈ ದಿನವನ್ನು ಚೆಸ್ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಆಚರಿಸುಲಾಗುತ್ತದೆ.

