ಕಾಸರಗೋಡು: ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ ಎಂಬ ಶೀರ್ಷಿಕೆಯಲ್ಲಿ 'ಸಂಘಟನೆಯ ಸವಾಲುಗಳು'ಎಂಬ ವಿಶೇಷ ಚಿಂತನ ಮಂಥನ ಕಾರ್ಯಕ್ರಮ ಹಾಗೂ ಪ್ರಸಂಗ ರಚನಾ ಕಮ್ಮಟ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರದಲ್ಲಿ ಜರುಗಿತು.
ಯಕ್ಷಗಾನದ ವಿದ್ವಾಂಸ, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂಎಲ್ ಸಾಮಗ ಉಡುಪಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಂಘಟನೆಯೊಂದು ಯಶಸ್ಸು ಸಾಧಿಸಲು ಪ್ರಾಯೋಜಕರ ವಿಶ್ವಾಸ ಗಳಿಸುವುದು ಅನಿವಾರ್ಯ. ಯಕ್ಷಗಾನಕ್ಕೆ ಹೊಸತಲೆಮಾರಿನ ಕಲಾವಿದರನ್ನು ಸೆಳೆಯುವ ಪ್ರಯತ್ನ ಇಂತಹ ಕಾರ್ಯಕ್ರಮಗಳಿಂದ ಸಾಧ್ಯವಾಗುವುದಾಗಿ ತಿಳಿಸಿದರು.
ಹಿರಿಯ ಸಂಘಟಕ ಭುಜಬಲಿ ಧರ್ಮಸ್ಥಳ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ರಾದ ಡಾ. ಟಿ. ಶ್ಯಾಮ ಭಟ್ ಹಾಗೂ ಹಿರಿಯ ಸಂಘಟಕ ಎಂ. ಶಾಂತಾರಾಮ ಕುಡ್ವ ಮೂಡುಬಿದಿರೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಚಾಲಕ ಉಜಿರೆ ಅಶೋಕ ಭಟ್ ಉಪನ್ಯಾಸ ನೀಡಿದರು.
ಸಂಘಟಕರಾದ ಚಂದ್ರಶೇಖರ್ ಭಟ್ ಕೊಂಕಣಾಜೆ, ಜನಾರ್ಧನ ಅಮ್ಮುಂಜೆ, ಗಣೇಶ್ ಪಾಲೆಚಾರ್, ವಿನಯ ಆಚಾರ್ ಹೊಸಬೆಟ್ಟು, ಸುಬ್ರಹ್ಮಣ್ಯ ಬೈಪಡಿತ್ತಾಯ ನಂದಳಿಕೆ, ದಿವಾಕರ ಆಚಾರ್ಯ ಗೇರು ಕಟ್ಟೆ, ಸದಾಶಿವ ನೆಲ್ಲಿಮಾರು, ವಸಂತ ಮಾಸ್ಟರ್ ಬಾಯಾರು, ಜಯರಾಮ ದೇವಸ್ಯ, ಕುಮಾರ ಶಂಕರ ಭಟ್ ತಲೆಂಗಳ, ತಲ್ಪಣಾಜೆ ವೆಂಕಟ್ರಮಣ ಭಟ್, ಜಯಲಕ್ಷ್ಮಿ ಆರ್ ಹೊಳ್ಳ, ಗಣೇಶ ನಾವಡ. ಮೀಯಪದವು, ನಾರಾಯಣ ತುಂಗ ಮಧೂರು, ಪೆರುವಡಿ ಸುಬ್ರಹ್ಮಣ್ಯ ಭಟ್, ಜಯಲಕ್ಷ್ಮಿ ಕಾರಂತ, ರಾಜಾರಾಮ ಹೊಳ್ಳ ಕೈರಂಗಳ, ರಾಧಾಕೃಷ್ಣ ಕೆ ಉಳಿಯತ್ತಡ್ಕ, ರಮೇಶ್ ಕೆ, ವಿ, ಪೆÇ್ರ. ಶ್ರೀನಾಥ್ ಕಾಸರಗೋಡು, ಜಗದೀಶ ಕೂಡ್ಲು, ಅನುಪಮಾ ರಾಘವೇಂದ್ರ ಭಟ್ ಉಡುಪಮೂಲೆ ಉಪಸ್ಥೀತರಿದ್ದರು. ಪ್ರತಿಷ್ಠಾನದ ಅಧ್ಯಕ್ಷ ರಾದ ರಾಮಕೃಷ್ಣ ಮಯ್ಯ ಸ್ವಾಗತಿಸಿದರು. ರಾಜಾರಾಮ ರಾವ್ ಮೀಯಪದವು ಕಾರ್ಯಕ್ರಮ ನಿರೂಪಿಸಿದರು. ಸುಮಿತ್ರಾ ಮಯ್ಯ ಸಿರಿಬಾಗಿಲು ವಂದಿಸಿದರು.



