HEALTH TIPS

ಕನ್ನಡ ಹೋರಾಟಗಾರ, ಹಿರಿಯ ವಕೀಲ ಅಡೂರು ಉಮೇಶ್ ನಾಯ್ಕ್ ಅವರಿಗೆ ಅಭಿಮಾನಿಗಳ ಸನ್ಮಾನ

ಮುಳ್ಳೇರಿಯ: ಹಿರಿಯ ವಕೀಲ,  ಕನ್ನಡ ಹೋರಾಟಗಾರ, ಧಾರ್ಮಿಕ, ಸಾಂಸ್ಕøತಿಕ, ಸಾಮಾಜಿಕ ಮುಂದಾಳು ಅಡೂರು ಉಮೇಶ್ ನ್ಯಾಕ್ ಅವರನ್ನು ಅವರ ಅಭಿಮಾನಿಗಳ ವತಿಯಿಂದ ಅವರ ನಿವಾಸಕ್ಕೆ ತೆರೆಳಿ ಗೌರವಿಸಲಾಯಿತು. 


ಹಿರಿಯ ವಕೀಲ, ಹರಿದಾಸ, ಹಾಗೂ ಸ0ಘಟಕ ಮಹಾಬಲ ಶೆಟ್ಟಿ, ನಿವೃತ್ತ ಕಸ್ಟಂಸ್ ಅಧಿಕಾರಿ ಶುಭೋದಯ ಕೂಡ್ಲು ಅವರ ನೇತೃತ್ಯದಲ್ಲಿ ಗೌರವಾರ್ಪಣೆ.ನಡೆಯಿತು. ರಂಗ ಸಂಘಟಕ, ಚಲನಚಿತ್ರ ನಿರ್ದೇಶಕ-ನಟ ಕಾಸರಗೋಡು ಚೆನ್ನಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಉಮೇಶ್ ನಾಯ್ಕ್ ಅವರ ಕನ್ನಡದ ಹೋರಾಟದ ಕಿಚ್ಚು ಯುವತಲೆಮಾರಿಗೆ ಸ್ಪೂರ್ತಿದಾಯಕವಾದುದು.  ತನ್ನ ಹದಿಯರೆಯದಲ್ಲೂ ಕನ್ನಡಕ್ಕಾಗಿ ತುಡಿಯುವ ಅವರ ಮನಸ್ಸು ಕನ್ನಡಿಗರಲ್ಲಿ ಹುಮ್ಮಸ್ಸಿಗೆ ಕಾರಣವಾಗುತ್ತಿದೆ.    ಅವರ ಹೋರಾಟದ ಕೆಚ್ಚನ್ನು  ಇನ್ನೂ ಉಳಿಸಿಕೊಂಡಿರುವುದಾಗಿ ತಿಳಿಸಿದ ಚಿನ್ನಾ ಅವರು, ಉಮೇಶ್ ನಾಯ್ಕ್ ಅವರ ಜೀವಮಾನದ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು.  

ವಕೀಲ ಮಹಾಬಲ ಶೆಟ್ಟಿ ಕೂಡ್ಲು,  ಶುಭೋದಯ ಕೂಡ್ಲು, ಕೊಲ್ಯ ರಮಾನಂದ ಸ್ವಾಮಿಜಿ ಸಮಿತಿ ಟ್ರಸ್ಟಿ ರಾಧಾಕೃಷ್ಣ ಶೆಟ್ಟಿ, ಮೆರ್ವಿನ್ ಡಿಸೋಜಾ, ಕಾಸರಗೋಡು ಚಿನ್ನಾ ಅವರು ಉಮೇಶ್ ನಾಯ್ಕ್  ಅವರನ್ನು ಫಲ ಪುಷ್ಟ ಗಳನ್ನಿತ್ತು ಶಾಲು ಹೊದೆಸಿ ಪೇಟ ತೊಡಿಸಿ ಗೌರವಿಸಿದರು. ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.  

ಹಿರಿಯ ಪತ್ರಕರ್ತ, ರಂಗನಟ ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡು ಕಾರ್ಯಕ್ರಮ ನಿರೂಪಿಸಿದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries