ಕಾಸರಗೋಡು: ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ, ಕಾಞಂಗಾಡ್ ರೋಟರಿ ವತಿಯಿಂದ ಹಿರಿಯ ವೈದ್ಯರು ಮತ್ತು ಚಾರ್ಟರ್ಡ್ ಅಕೌಂಟೆಂಟ್ಗಳನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಡಾ. ಎಂ.ಆರ್. ನಂಬಿಯಾರ್, ಡಾ. ಕೆ.ವಿ. ವಾಸು ಮತ್ತು ಎಂ.ಸಿ. ಜಾಕೋಬ್ ಅವರನ್ನು ರೋಟರಿ ಜಿಲ್ಲಾ ಗವರ್ನರ್ ಎಂ.ವಿ. ಮೋಹನದಾಸ್ ಮೆನನ್ ಸನ್ಮಾನಿಸಿದರು. ಈ ಸಂದರ್ಭ ಮಾತನಾಡಿದ ಅವರು, ಆರೋಗ್ಯಕರ ಜನಸಂಖ್ಯೆ ಮತ್ತು ಆರ್ಥಿಕವಾಗಿ ಬಲಿಷ್ಠ ದೇಶವನ್ನು ನಿರ್ಮಿಸುವಲ್ಲಿ ಎರಡೂ ವಲಯಗಳ ಕೊಡುಗೆ ಮಹತ್ವದ್ದಾಗಿದೆ ಎಂದು ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ವಕೀಲ ಎ. ಮನೋಜ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಗವರ್ನರ್ ಕೆ. ಸತ್ಯನಾಥ್ ಶೆಣೈ, ರೋಟರಿ ಗವರ್ನರ್ ಪ್ರತಿನಿಧಿ ಕೆ.ಕೆ. ಸೆವಿಚನ್, ಮಾಜಿ ಅಧ್ಯಕ್ಷರಾದ ಜಯೇಶ್.ಕೆ. ಜನಾರ್ದನನ್, ಕಾರ್ಯದರ್ಶಿ ಡಾ. ರಾಜಶ್ರೀ ಸುರೇಶ್ ನಾಯರ್, ಮತ್ತು ಮಾಜಿ ಕಾರ್ಯದರ್ಶಿ ಡಾ. ಕೆ. ಮಂಜುನಾಥ್ ಪೈ ಉಪಸ್ಥಿತರಿದ್ದರು.


