ಕುಂಬಳೆ: ಸಾವಯವ ಕೃಷಿ ಯೋಜನೆಯನ್ವಯ ಜಿಲ್ಲೆಯ 3,000 ಹೆಕ್ಟೇರ್ ಭೂಮಿಯಲ್ಲಿ ಸಾವಯವ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆ ಸಾವಯವ ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾರಂಭಿಸಿದೆ.
ಯೋಜನೆಯಲ್ಲಿ ಪಾಲ್ಗೊಳ್ಳುವ ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಆನ್‍ಲೈನ್ ಮೂಲಕ ಮಾರಾಟ ಮಾಡುವ ಅವಕಾಶ ಲಭ್ಯವಾಗಲಿದ್ದು, ಈ ವಿಧಾನದಿಂದ ರೈತರಿಗೆ ತಮ್ಮ ಉತ್ಪನ್ನಗಳಿಗೆ ಧಾರಣೆಯನ್ನು ಸ್ವತ: ತಾವೇ ನಿರ್ಧರಿಸಲು ಅನುವು ಮಾಡಿಕೊಡಲಿದೆ. ಸಾವಯವ ಕೃಷಿ ನೀತಿಯ ಅನುಷ್ಠಾನದ ಅಂಗವಾಗಿ, 2012ರಲ್ಲಿ ಕಾಸರಗೋಡು ಜಿಲ್ಲೆಯನ್ನು 'ಸಾವಯವ ಜಿಲ್ಲೆ' ಎಂದು ಘೋಷಿಸಲಾಗಿದ್ದು, ಪ್ರಮುಖ ಬೆಳೆಗಳಿಗೆ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಯೋಜನೆಯನ್ನು ಪ್ರಾರಂಭಿಸಲಾಗಿದೆ.
'ಪಾಲ್ಗೊಳ್ಳುವಿಕೆಯ ಖಾತ್ರಿ ವ್ಯವಸ್ಥೆ'ಯನ್ನು (Pಚಿಡಿಣiಛಿiಠಿಚಿಣoಡಿಥಿ ಉuಚಿಡಿಚಿಟಿಣee Sಥಿsಣem-PಉS) ಬಳಸಿಕೊಂಡು ಸಮೂಹ ಆಧಾರಿತವಾಗಿ ಸಾವಯವ ಕೃಷಿಯನ್ನು ಉತ್ತೇಜಿಸಲು 2020-21ರಲ್ಲಿ 'ಭಾರತೀಯ ಪ್ರಕೃತಿ ಕೃಷಿ ಪದ್ಧತಿ'ಯೋಜನೆಯನ್ನು ಆರಂಭಿಸಲಾಗಿದೆ.
ಇದರ ಪಿಜಿಎಸ್ ಇಂಡಿಯಾ ವೆಬ್ ಪೆÇೀರ್ಟಲ್‍ನಲ್ಲಿ ನೋಂದಾಯಿಸಿಕೊಂಡು, ಯೋಜನೆಯ ಮಾನದಂಡಗಳಿಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯುವ ರೈತರು ಮೂರು ವರ್ಷಗಳ ನಂತರ ಪಿಜಿಎಸ್ ಸಾವಯವ ಪ್ರಮಾಣಪತ್ರ ಪಡೆಯುತ್ತಾರೆ. ಈ ಪ್ರಮಾಣಪತ್ರ ಪಡೆದ ರೈತರು ಮಾತ್ರ ತಮ್ಮ ಉತ್ಪನ್ನಗಳನ್ನು ಸಾವಯವ ಆನ್‍ಲೈನ್ ಮಾರುಕಟ್ಟೆಯಾದ 'ಜೈವಿಕಖೇತಿ' ಪೆÇೀರ್ಟಲ್ ಮೂಲಕ ಮಾರಾಟ ಮಾಡಲು ಅರ್ಹರಾಗಿರುತ್ತಾರೆ.
ಈ ಯೋಜನೆಯನ್ವಯ ಜಿಲ್ಲೆಯನ್ನು ಆರು ಬ್ಲಾಕ್‍ಗಳಾಗಿ ವಿಂಗಡಿಸಲಾಗಿದ್ದು, ರಾಸಾಯನಿಕ ರಸಗೊಬ್ಬರ ಮತ್ತು ಕೀಟನಾಶಕಗಳಿಗೆ ಪರ್ಯಾಯವಾಗಿ ಜೀವಾಮೃತ, ಬೀಜಾಮೃತ ಹಾಗೂ ಪಂಚಗವ್ಯದಂತಹ ನೈಸರ್ಗಿಕ ಉತ್ಪನ್ನಗಳನ್ನು ತಯಾರಿಸುವ ಕುರಿತು ತರಬೇತಿ ನೀಡಲಾಗುತ್ತಿದೆ. ಯೋಜನೆಯ ಸುಗಮ ಅನುಷ್ಠಾನವನು ಖಾತ್ರಿಪಡಿಸಲು, ಆಯ್ಕೆಮಾಡಿದ ರೈತರ ನೇತೃತ್ವದಲ್ಲಿ ತರಬೇತಿ ಕಾರ್ಯಕ್ರಮ, ಕ್ಷೇತ್ರ ಮಟ್ಟದ ಮೇಲ್ವಿಚಾರಣೆ ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತಿದೆ. ಅಲ್ಲದೆ, ಕೃಷಿ ಭವನದ ಆಶ್ರಯದಲ್ಲಿ ಅಧ್ಯಯನ ಪ್ರವಾಸಗಳು, ಕಿಸಾನ್ ಮೇಳಗಳು ಮತ್ತು ಮಾದರಿ ಕೃಷಿ ಕ್ಷೇತ್ರಗಳ ಸ್ಥಾಪನೆಯಂತಹ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ.ಸಾಂಪ್ರದಾಯಿಕ ಕೃಷಿಗಾಗಿ ಸಹಾಯಧನ ಮತ್ತು ಪೆÇ್ರೀತ್ಸಾಹಕಗಳನ್ನು ಸಹ ಜಾರಿಗೆ ತರಲಾಗುತ್ತಿದೆ. ಜಿಲ್ಲೆಯ ಆರು ಬ್ಲಾಕ್‍ಗಳಲ್ಲಿ ಸಾವಯವ ಕೃಷಿಯನ್ನು ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ ಪ್ರತಿ ಬ್ಲಾಕ್‍ನಲ್ಲಿ 500 ಹೆಕ್ಟೇರ್ ಕೃಷಿಭೂಮಿಯನ್ನು ಬಳಸಿಕೊಳ್ಳಲಾಗುತ್ತಿದೆ.
ಜಿಲ್ಲೆಯ ಒಟ್ಟು 6,492 ರೈತರು ಈ ಯೋಜನೆಯ ಭಾಗವಾಗಿದ್ದು, 3,000 ಹೆಕ್ಟೇರ್ ಭೂಮಿಯನ್ನು ಯಶಸ್ವಿಯಾಗಿ ಸಾವಯವ ಕೃಷಿ ವ್ಯಾಪ್ತಿಗೆ ತಂದಿರುವುದು ಕೃಷಿ ಇಲಾಖೆಯ ಸಾಧನೆಯಾಗಿದೆ. ಕಾಸರಗೋಡು ಜಿಲ್ಲೆ ಈ ಉಪಕ್ರಮದನ್ವಯ ಗುರುತಿಸಲಾದ ಸಂಪೂರ್ಣ ಪ್ರದೇಶಕ್ಕೆ 'ಪಿಜಿಎಸ್ ಗ್ರೀನ್ ಸ್ಕೋಪ್' (PಉS ಉಡಿeeಟಿ Sಛಿoಠಿe) ಪ್ರಮಾಣಪತ್ರ ಪಡೆಯುವಲ್ಲಿ ಯಶಸ್ವಿಯಾದ ಏಕೈಕ ಜಿಲ್ಲೆಯಾಗಿದೆ. ಈ ವಿಧಾನವನ್ನು ಬಳಸಿ ತೆಂಗು, ಅಡಿಕೆ, ಬಾಳೆ, ಕಾಳುಮೆಣಸು, ತರಕಾರಿಗಳು ಮತ್ತು ಹಣ್ಣುಗಳಂತಹ ಬೆಳೆಗಳನ್ನು ಬೆಳೆಯಲಾಗುತ್ತದೆ.



