HEALTH TIPS

ಕೆಂಪು ಲಿಪ್‌ಸ್ಟಿಕ್ ಹಾಕಿದರೆ ಕಠಿಣ ಶಿಕ್ಷೆ; ಉತ್ತರ ಕೊರಿಯಾದಲ್ಲಿ ಕಿಮ್‌ ದರ್ಬಾರ್

ಪ್ಯಾಂಗ್‌ಯಾಂಗ್: ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಧ್ಯಕ್ಷ ಉತ್ತರ ಕೊರಿಯಾದ ಜನರಿಗೆ ವಿಚಿತ್ರ ಮತ್ತು ಕಠಿಣ ನಿಯಮಗಳನ್ನು ವಿಧಿಸುವುದು ಹೊಸದೇನಲ್ಲ. ದೇಶದ ಜನರ ಜೀವನ ಶೈಲಿ ಹಾಗೂ ಸೌಂದರ್ಯ ವರ್ಧಕಗಳ ಮೇಲೆಯೂ ಅಲ್ಲಿನ ಸರ್ಕಾರ ನಿಗಾ ಇಟ್ಟಿದೆ.


ಜಾಗತಿಕ ಮಟ್ಟದ ಪ್ರಸಿದ್ಧ ಫ್ಯಾಷನ್ ಹಾಗೂ ಕಾಸ್ಮೆಟಿಕ್ ಬ್ರ್ಯಾಂಡ್‌ಗಳನ್ನು ಈಗಾಗಲೇ ನಿಷೇಧಿಸಿರುವ ಕಿಮ್ ಸರ್ಕಾರ, ಮಹಿಳೆಯರು ಕೆಂಪು ಬಣ್ಣದ ಲಿಪ್‌ಸ್ಟಿಕ್ ಹಚ್ಚುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ನಿಯಮ ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆಯ ಎಚ್ಚರಿಕೆಯನ್ನೂ ನೀಡಲಾಗಿದ್ದು, ಈ ಹೊಸ ಆದೇಶ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕೆಂಪು ಲಿಪ್‌ಸ್ಟಿಕ್ ನಿಷೇಧಕ್ಕೆ ಕಾರಣವೇನು?

ಸಾಮಾನ್ಯವಾಗಿ ಕೆಂಪು ಬಣ್ಣವು ಕ್ರಾಂತಿಯ ಸಂಕೇತವೆಂದು ಪರಿಗಣಿಸಲ್ಪಡುತ್ತದೆ. ಆದರೆ, ಉತ್ತರ ಕೊರಿಯಾ ಸರ್ಕಾರದ ಪ್ರಕಾರ, ಕೆಂಪು ಲಿಪ್‌ಸ್ಟಿಕ್ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ವಿರುದ್ಧವಾಗಿದ್ದು, ಅದು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದ ಸಂಕೇತವಾಗಿದೆ.

ಇದಷ್ಟೇ ಅಲ್ಲದೆ, ಕೆಂಪು ಲಿಪ್‌ಸ್ಟಿಕ್ ಹಚ್ಚುವುದರಿಂದ ಮಹಿಳೆಯರು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಾರೆ. ಇದು ಸರ್ಕಾರದ ಸರಳತೆ ಮತ್ತು ಸಭ್ಯತೆಯ ಸಿದ್ಧಾಂತಕ್ಕೆ ಮಾರಕ ಎಂಬುದು ಅಲ್ಲಿನ ವಾದವಾಗಿದೆ. ಹೀಗಾಗಿ ಮಹಿಳೆಯರು ಅತ್ಯಂತ ಸರಳ ಹಾಗೂ ನೈಸರ್ಗಿಕವಾದ ಮೇಕಪ್ ಮಾತ್ರ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ.

ಉತ್ತರ ಕೊರಿಯಾದ ಕಟ್ಟುಪಾಡುಗಳು ಕೇವಲ ಲಿಪ್‌ಸ್ಟಿಕ್‌ಗೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬಂಡವಾಳಶಾಹಿ ಶೈಲಿಗೆ ಹತ್ತಿರವೆನಿಸುವ ಬಿಗಿಯಾದ ಜೀನ್ಸ್, ನೀಲಿ ಬಣ್ಣದ ಜೀನ್ಸ್, ಮೂಗು-ಕಿವಿ ಚುಚ್ಚಿಸಿಕೊಳ್ಳುವುದು ಹಾಗೂ ಮಹಿಳೆಯರ ಉದ್ದನೆಯ ಕೂದಲು, ವಿವಿಧ ರೀತಿಯ ಕೇಶವಿನ್ಯಾಸಗಳನ್ನು ನಿಷೇಧಿಸಲಾಗಿದೆ. ಸರ್ಕಾರ ಅನುಮೋದಿಸಿದ ಕೇಶವಿನ್ಯಾಸಗಳನ್ನು ಮಾತ್ರ ಪುರುಷರು ಮತ್ತು ಮಹಿಳೆಯರು ಅನುಸರಿಸಬೇಕಿದೆ.

ಕೆಲವು ನಿಷೇಧಗಳು ಸರ್ಕಾರದ ಸಿದ್ಧಾಂತಕ್ಕಿಂತ ಹೆಚ್ಚಾಗಿ ಕಿಮ್ ಜಾಂಗ್ ಉನ್ ಅವರ ವೈಯಕ್ತಿಕ ಇಷ್ಟಕಷ್ಟಗಳಿಗೆ ಸಂಬಂಧಿಸಿವೆ. ಕಿಮ್ ಜಾಂಗ್ ಉನ್ ಧರಿಸುವ ಕಪ್ಪು ಬಣ್ಣದ ಟ್ರೆಂಚ್ ಕೋಟ್ ಅಥವಾ ಅವರ ಸಿಗ್ನೇಚರ್ ಕೇಶವಿನ್ಯಾಸವನ್ನು ಯಾರೂ ಅನುಕರಿಸುವಂತಿಲ್ಲ. ಜನ ಸಾಮಾನ್ಯರು ತಮ್ಮ ಶೈಲಿಯನ್ನು ಅನುಸರಿಸಬಾರದು ಎಂಬ ಕಾರಣಕ್ಕೆ ಕಿಮ್ ಇದನ್ನು ಬ್ಯಾನ್ ಮಾಡಿದ್ದಾರೆ.

ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ

ಜನರು ಈ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿದ್ದಾರೆಯೇ ಎಂದು ತಪಾಸಣೆ ನಡೆಸಲು ಕಾವಲು ಪಡೆ ರಸ್ತೆಗಿಳಿದು ನಿರಂತರ ನಿಗಾ ವಹಿಸುತ್ತದೆ. ಸರ್ಕಾರದ ಈ ವಿಚಿತ್ರ ನಿಯಮಗಳನ್ನು ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಕೆಂಪು ಲಿಪ್‌ಸ್ಟಿಕ್‌ ಹಚ್ಚಿದ್ದು ಕಂಡು ಬಂದರೆ ಭಾರಿ ದಂಡದ ಜೊತೆಗೆ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries