ಕಾಸರಗೋಡು: ಚೀಮೇನಿ ತೆರೆದ ಕಾರಾಗೃಹದಿಂದ ಸ್ಮಾರ್ಟ್ ಮೊಬೈಲ್ ಫೆÇೀನ್, ಎರಡು ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಜೈಲಿನ ಸುಪರಿಂಟೆಂಡೆಂಟ್ ಅನ್ವರ್ ಅವರ ದೂರಿನನ್ವಯ ಚೇಮನಿ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಒಬ್ಬಾತ ಕೈದಿ ಕಾರಾಗೃಹದೊಳಗೆ ಮೊಬೈಲ್ಫೆÇೀನ್ ಉಪಯೋಗಿಸುತ್ತಿದ್ದಾನೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಚೇಮೇನಿ ತೆರೆದ ಜೈಲಿನ ಅಸಿಸ್ಟೆಂಟ್ ಸುಪರಿಂಟೆಂಡೆಂಟ್ ನೇತೃತ್ವದಲ್ಲಿ ಅಧಿಕಾರಿಗಳು ತಪಾಸಣೆ ನಡೆಸುತ್ತಿರುವ ಮಧ್ಯೆ ಮೊಬೈಲ್ ಪತ್ತೆಯಾಗಿದೆ. ಅದರಿಂದ ಎರಡು ಸಿಮ್ ಕಾರ್ಡ್ಗಳನ್ನು ಪತ್ತೆಹಚ್ಚಲಾಗಿದೆ. ಮೊಬೈಲ್ಫೆÇೀನ್ ಕೈವಶವಿರಿಸಿಕೊಂಡಿದ್ದ ಡಿ ಬ್ಲೋಕ್ ಕೈದಿ ರಹೀಲ್ ಎಂಬಾತನ ವಿರುದ್ಧ ಕೇಸ್ ಪ್ರಕರಣ ದಾಖಲಿಸಲಾಗಿದೆ. ಕಳೆದ ಜೂನ್ನಲ್ಲೂ ಜೈಲಿನಿಂದ ಮೊಬೈಲ್ ವಶಪಡಿಸಿಕೊಳ್ಳಲಾಗಿತ್ತು.

