ಕಾಸರಗೋಡು: ಶ್ರೀ ನಾರಾಯಣ ಗುರು ಓಪನ್ ವಿಶ್ವವಿದ್ಯಾಲಯದ 2026 ಜುಲೈ ಅಡ್ಮಿಷನ್ ಪ್ರಕ್ರಿಯೆಯು ಪ್ರಾರಂಭವಾಗಿದೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದೂರಶಿಕ್ಷಣಕ್ಕಾಗಿ ಮಾತ್ರ ಪ್ರತ್ಯೇಕವಾಗಿ ಸ್ಥಾಪಿಸಲಾದ ಕೇರಳದ ಮೊದಲ ವಿಶ್ವವಿದ್ಯಾಲಯ ಶ್ರೀ ನಾರಾಯಣ ಗುರು ಓಪನ್ ಯೂನಿವರ್ಸಿಟಿ ಆಗಿದೆ. ಯು.ಜಿ.ಸಿಯ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಕೇರಳದ ಇತರ ವಿಶ್ವವಿದ್ಯಾಲಯಗಳು ನಡೆಸುವಂತೆಯೇ ಪದವಿಪೂರ್ವ, ಸ್ನಾತಕೋತ್ತರ ಮತ್ತು ಅಲ್ಪಾವಧಿಯ ಕೋರ್ಸ್‌ಗಳನ್ನು ನೀಡುತ್ತವೆ. ವಿಶ್ವವಿದ್ಯಾಲಯವು ನೀಡುವ ಎಲ್ಲಾ ಪ್ರೋಗ್ರಾಂಗಳು ಯು.ಜಿ.ಸಿ ಅಂಗೀಕರಿಸಿದೆ ಹಾಗೆಯೇ ಪಿಎಸ್‌ಸಿ, ಯುಪಿಎಸ್‌ಸಿ ಇತರ ಪರೀಕ್ಷಾ ಮಂಡಳಿಗಳು, ವಿಶ್ವವಿದ್ಯಾಲಯಗಳು, ರೆಕ್ರೂಟ್ಮೆಂಟ್ ಏಜೆನ್ಸಿಗಳು ಅಂಗೀಕರಿಸಿದೆ. ವಿದ್ಯಾರ್ಥಿಗಳಿಗೆ ಆಸಕ್ತಿಯಿರುವ ಕೋರ್ಸನ್ನು ಕಲಿಬಹುದು ಜೊತೆಗೆ ಡಬಲ್ ಡಿಗ್ರಿ ಪಡೆಯುವ ಅವಕಾಶವನ್ನು ಒದಗಿಸುತ್ತದೆ. ಉದ್ಯೋಗಸ್ಥರು, ನಿರುದ್ಯೋಗಿಗಳು ಮತ್ತು ಗೃಹಿಣಿಯರು ಎಲ್ಲರಿಗೂ ವಿಶ್ವವಿದ್ಯಾಲಯದ ವಿವಿಧ ಕೋರ್ಸ್‌ಗಳಿಗೆ ನೋಂದಾಯಿಸಿಕೊಳ್ಳಬಹುದು. ಕೋರ್ಸ್‌ಗಳಿಗೆ ನೋಂದಾಯಿಸುವ ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ಇ-ಗ್ರಾಂಟ್‌ಗಳಂತಹ ಆರ್ಥಿಕ ಸಹಾಯವನ್ನು ಪಡೆಯಬಹುದು. ಪರಿಣಿತ ಶಿಕ್ಷಕರಿಂದ ನಡೆಸಲ್ಪಡುವ ತರಗತಿಗಳು ಹಾಗೂ ವೈಜ್ಞಾನಿಕವಾಗಿ ರೂಪಿಸಲಾದ ಸ್ಟಡಿ ಮೆಟೀರಿಯಲ್ ಈ ವಿಶ್ವವಿದ್ಯಾಲಯವು ಒದಗಿಸುತ್ತದೆ. ಪ್ರವೇಶ ಪಡೆಯಲು ಇಚ್ಛಿಸುವವರು ವಿಶ್ವವಿದ್ಯಾಲಯದ ವೆಬ್‌ಸೈಟ್ www.sgou.ac.in ಮೂಲಕ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕಾಞಂಗಾಡ್ ನೆಹರು ಕಾಲೇಜಿನಲ್ಲಿರುವ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರವನ್ನು ಸಂಪರ್ಕಿಸಿ. ದೂರವಾಣಿ: 9495868036.

