ಬದಿಯಡ್ಕ: ವರ್ತಮಾನದ ತಲ್ಲಣಗಳಿಗೆ ಕಾರಣಗಳನ್ನು ಪತ್ತೆಮಾಡುತ್ತಾ ಹೋದಲ್ಲಿ ಪರಿಹಾರಗಳು ಲಭ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆದಿ ಶಂಕರರ ನೀಡಿದ ಸಂದೇಶಗಳು ನಮ್ಮ ಕಣ್ತೆರೆಸಿ ಬದುಕಿನ ಮೂಲ ಲಕ್ಷ್ಯದ ದಾರಿ ತೋರಿಸುತ್ತದೆ. ಶ್ರೀಶಂಕರರ ನೇತಿ, ನೇತಿಯಂತಹ ಸಂದೇಶಗಳನ್ನು ಪಾಲಿಸುತ್ತಾ ಬಂದಲ್ಲಿ ಆಂತರ್ಯದ ಸಂಘರ್ಷಗಳಿಗೆ ಉತ್ತರ ಕಂಡುಕೊಳ್ಳಬಹುದು. ಅವರ ಸಂದೇಶಗಳನ್ನು ಪಸರಿಸುವಲ್ಲಿ ಪೀಠಗಳು, ಮಠಾಧಿಪತಿಗಳ ಕೊಡುಗೆಗಳು ಸಮಾಜಕ್ಕೆ ಅತ್ಯಪೂರ್ವವಾದುದು ಎಂದು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಹಾಗೂ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಅಭಿಪ್ರಾಯ ವ್ಯಕ್ತಪಡಿಸಿದರು.
ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಷಷ್ಠ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಮೊದಲ ದಿನ ಬುಧವಾರ ಅಪರಾಹ್ನ ಮಠದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದರು.
ನಮ್ಮ ಸಂವಿಧಾನದಲ್ಲಿ ವಿಶೇಷ ಸ್ಥಾನ ಪಡೆದಿರುವ ಎಡನೀರು ಸ್ವಾಮೀಜೀಸ್ ದಾವೆ ಶ್ರೀಮಠ ಆಧುನಿಕ ವ್ಯವಸ್ಥೆಗೆ ನೀಡಿದ ಮಹತ್ತರ ಕೊಡುಗೆಗಳಲ್ಲಿ ಒಂದು. ಕೇವಲ ಧಾರ್ಮಿಕ ಆಚರಣೆಗಷ್ಟೇ ಅಲ್ಲದೆ ಸಾಮಾಜಿಕ, ಸಾಂಸ್ಕøತಿಕ ಚಟುವಟಿಕೆಗಳಿಗೆ ಶ್ರೀಸಚ್ಚಿದಾನಂದ ಭಾರತೀ ತೀರ್ಥರು ಕೈಗೊಳ್ಳುತ್ತಿರುವ ಬೆಂಬಲ, ಚಟುವಟಿಕೆಗಳು ಸ್ತುತ್ಯರ್ಹವಾದುದು ಎಂದರು.
ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ, ಉದ್ಯಮಿ ಬಲರಾಮ ಆಚಾರ್ಯ ಪುತ್ತೂರು ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ, ಉದ್ಯಮಿ ಸುರೇಶ್ ನಾಯಕ್ ಪೂನಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಉದ್ಯಮಿ ಕೃಷ್ಣಮೂರ್ತಿ ಮಂಜ ಹೈದರಾಬಾದ್, ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ ದುಬೈ ಗೌರವ ಉಪಸ್ಥಿತರಿದ್ದರು. ಈ ಸಂದರ್ಭ ಕೇಂದ್ರ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಆನೂರು ಅನಂತಕೃಷ್ಣ ಶರ್ಮಾ ಅವರನ್ನು ಅಭಿನಂದಿಸಲಾಯಿತು. ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಕೆಯ್ಯೂರು ನಾರಾಯಣ ಬಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ವಂದಿಸಿದರು.
ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳು ಆರಂಭಗೊಂಡಿತು. ಕರ್ನಾಟಕ ಶಾಸ್ತ್ರೀಯ ಹಾಗೂ ಹಿಂದುಸ್ಥಾನೀ ಶಾಸ್ತ್ರೀಯ ಸಂಗೀತ ವಿಶೇಷ ಜುಗಲ್‍ಬಂದಿ ಕಾರ್ಯಕ್ರಮ ನಡೆಯಿತು. ಕೊಳಲು ನಾದಜ್ಯೋತಿ ವಿದ್ವಾನ್ ಎಂ.ಕೆ. ಪ್ರಾಣೇಶ್, ಹಾರ್ಮೋನಿಯಂ ಪಂಡಿತ್ ಡಾ.ರವೀಂದ್ರ ಕಟೋಟಿ ಸಂವಾದಿನಿ, ಮೃದಂಗದಲ್ಲಿ ಅನೂರು ಅನಂತ ಕೃಷ್ಣ ಶರ್ಮ, ತಬಲಾದಲ್ಲಿ ಚಿ.ರೂಪಕ್ ಕಲ್ಲೂರ್ಕರ್ ಸಾಥ್ ನೀಡಿದರು.
ಚಾತುರ್ಮಾಸ್ಯದ ಎರಡು ತಿಂಗಳ ಕಾಲ ಸಾಂಸ್ಕøತಿಕ ಉತ್ಸವಗಳನ್ನು ವಿಶಾಲವಾಗಿ ಆಯೋಜಿಸಲು ಹಿಂದಿನ ಶ್ರೀಗಳ ಪರಂಪರೆಯ ಮುಂದುವರಿಕೆ. ಸಮಾಜಕ್ಕೆ ನಂಬಿಕೆಗೆ ನಮ್ಮ ಚಟುಚವಟುಕೆಗಳು ಅರ್ಹವಾಗಿರಬೇಕು. ಧಾರ್ಮಿಕ ಕೇಂದ್ರಗಳ ಜವಾಬ್ದಾರಿ ಸಮಾಜದಲ್ಲಿ ನಂಬಿಕೆಯನ್ನು ಗಟ್ಟಿಗೊಳಿಸುವುದು. ಧಾರ್ಮಿಕ ಅರಿವನ್ನು ವರ್ಗಾಯಿಸುವುದು ನಮ್ಮ ಕರ್ತವ್ಯ. ಎಲ್ಲಾ ಸಮಾಜ ಬಾಂಧವರು ಒಂದಾಗುವುದರಿಂದ ನೆಮ್ಮದಿ ಇದೆ.
-ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ.
ಇಂದಿನ ಕಾರ್ಯಕ್ರಮ:
ಅಖಂಡ ಭಜನಾ ಸಂಕೀರ್ತನೆಯ ಅಂಗವಾಗಿ ಬೆಳಿಗ್ಗಿನಿಂದ ಪೆರಡಾಲ ಉದನೇಶ್ವರ ಭಕ್ತವೃಂದದವರಿಂದ ಸಂಕೀರ್ತನೆ ನಡೆಯಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 6 ರಿಂದ ಶಿರಸಿಯ ನೂಪುರ ನೃತ್ಯ ಶಾಲೆಯ ವಿದುಷಿಃ ಅನುರಾಧಾ ಹೆಗಡೆ ಮತ್ತು ವಿದುಷಿಃ ಕೀರ್ತನಾ ಹೆಗಡೆ ಬಳಗದವರಿಂದ ಭರತನಾಟ್ಯ ಪ್ರದರ್ಶನ ನಡೆಯಲಿದೆ.

-side.jpg)


