ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದಯೋಗಾಶ್ರಮ ಮಠದ ಶ್ರೀಯೋಗಾನಂದಸರಸ್ವತೀ ಸ್ವಾಮೀಜಿಯವರು ತಮ್ಮ 23ನೇ ಚಾತುರ್ಮಾಸ್ಯ ವೃತಸಂಕಲ್ಪ ಗುರುಪೂರ್ಣಿಮೆಯ ದಿನವಾದ ಬುಧವಾರ ಸಾಂಪ್ರದಾಯಿಕ ಶ್ರದ್ಧಾ ಭಕ್ತಿಗಳೊಂದಿಗೆ ಆರಂಭಗೊಂಡಿತು.
ಬೆಳಿಗ್ಗೆ ಗಣಹೋಮ, ನಿತ್ಯಾನಂದ ಗುರುಗಳಿಗೆ ಪಂಚಾಮೃತಾಭಿಷೇಕ, ವಿಶೇಷ ಸೀಯಾಳಾಭಿಷೇಕ ಬಳಿಕ ವ್ಯಾಸಪೂಜೆ ಬಳಿಕ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಮಹಾಪೂಜೆಯ ನಂತರ ಶ್ರೀಗುರುಪಾದುಕಾ ಪೂಜೆ ನಡೆದು ಪೂಜ್ಯರು ಚಾತುರ್ಮಾಸ್ಯ ಸಂದೇಶ ನೀಡಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.
ಚಾತುರ್ಮಾಸ್ಯ ಸಂದರ್ಭದಲ್ಲಿ ಲೋಕಹಿತಾರ್ಥವಾಗಿ ಶ್ರೀವಿಷ್ಣುಸಹಸ್ರನಾಮ ಪಾರಾಯಣ ಮತ್ತುಯಜ್ಞ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಭಕ್ತಾದಿಗಳು ಹೆಚ್ಚಿನಸಂಖ್ಯೆಯಲ್ಲಿಪಾಲ್ಗೊಂಡು ಶ್ರೀಗುರು ಅನುಗ್ರಹಿತರಾಗಬೇಕೆಂದು ಶ್ರೀಮಠದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.



