ಚುನಾವಣೆ ಹತ್ತಿರ ಬಂದಾಗಲೆಲ್ಲಾ ಪ್ರತಿಯೊಬ್ಬರ ಮನದಲ್ಲೂ ಮೂಡುವ ಮೊದಲ ಅನುಮಾನ, ನನ್ನ ಹೆಸರು ವೋಟರ್ ಲಿಸ್ಟ್‌ನಲ್ಲಿ (Voter List) ಇದೆಯೋ ಇಲ್ಲವೋ?" ಎಂಬುದು. ಹಿಂದೆಲ್ಲಾ (Tech News) ಈ ಒಂದು ಸಣ್ಣ ಮಾಹಿತಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಿತ್ತು ಅಥವಾ ಬೂತ್ ಮಟ್ಟದ ಅಧಿಕಾರಿಗಳನ್ನು (BLO) ಹುಡುಕಿಕೊಂಡು ಹೋಗಬೇಕಿತ್ತು.
ಆದರೆ ಡಿಜಿಟಲ್ ಇಂಡಿಯಾ ಕಾಲದಲ್ಲಿ, ನೀವಿರುವ ಜಾಗದಿಂದಲೇ ಕೆಲವೇ ನಿಮಿಷಗಳಲ್ಲಿ ನಿಮ್ಮ ವೋಟಿಂಗ್ ಸ್ಟೇಟಸ್ ತಿಳಿದುಕೊಳ್ಳುವುದು ತೀರಾ ಸುಲಭವಾಗಿದೆ.
ನಿಮ್ಮ ಬಳಿ ಸ್ಮಾರ್ಟ್‌ಫೋನ್ ಒಂದಿದ್ದರೆ ಸಾಕು, ಈ ಕೆಳಗಿನ ಮೂರು ವಿಭಿನ್ನ ಮಾರ್ಗಗಳ ಮೂಲಕ ನಿಮ್ಮ ಹೆಸರು ಲಿಸ್ಟ್‌ನಲ್ಲಿದೆಯೇ ಎಂದು ಪರಿಶೀಲಿಸಿಕೊಳ್ಳಬಹುದು.
ಮಾರ್ಗ 1: ವೆಬ್‌ಸೈಟ್ ಮೂಲಕ ಆನ್‌ಲೈನ್ ಪರಿಶೀಲನೆ
ನೀವು ಕಂಪ್ಯೂಟರ್ ಅಥವಾ ಮೊಬೈಲ್ ಬ್ರೌಸರ್ ಬಳಸಿ ನೇರವಾಗಿ ಈ ಹಂತಗಳನ್ನು ಅನುಸರಿಸಬಹುದು:
- ಚುನಾವಣಾ ಆಯೋಗದ https://www.eci.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಮುಖ್ಯ ಪುಟದಲ್ಲಿ 'Election Management' ವಿಭಾಗಕ್ಕೆ ಹೋಗಿ, ಅಲ್ಲಿ 'Electoral Roll' ಕ್ಲಿಕ್ ಮಾಡಿ.
- ನಂತರ ತೆರೆಯುವ ಪುಟದಲ್ಲಿ 'Voter Search' ಆಯ್ಕೆಯನ್ನು ಒತ್ತಿ.
- ಇಲ್ಲಿ ನಿಮಗೆ ಮೂರು ನಮೂನೆಯಲ್ಲಿ ಹುಡುಕಲು ಅವಕಾಶವಿರುತ್ತದೆ:
- EPIC ಮೂಲಕ: ನಿಮ್ಮ ವೋಟರ್ ಐಡಿ ಸಂಖ್ಯೆ ಹಾಕಿ ಹುಡುಕುವುದು.
- ವಿವರಗಳ ಮೂಲಕ: ಹೆಸರು, ಜನ್ಮ ದಿನಾಂಕ, ತಂದೆಯ ಹೆಸರು ಮತ್ತು ಜಿಲ್ಲೆಯನ್ನು ನಮೂದಿಸಿ ಹುಡುಕುವುದು.
- ಮೊಬೈಲ್ ಸಂಖ್ಯೆ ಮೂಲಕ: ನಿಮ್ಮ ವೋಟರ್ ಐಡಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಹಾಕಿ ಒಟಿಪಿ ಪಡೆಯುವುದು.
ಮಾರ್ಗ 2 : ಇಂಟರ್ನೆಟ್ ಇಲ್ಲದೆಯೂ ಎಸ್‌ಎಂಎಸ್ (SMS) ಸೇವೆ!
- ನಿಮ್ಮ ಬಳಿ ಇಂಟರ್ನೆಟ್ ಸೌಲಭ್ಯವಿಲ್ಲದಿದ್ದರೂ ಚಿಂತಿಸಬೇಕಿಲ್ಲ. ನಿಮ್ಮ ಫೋನ್‌ನಿಂದ ಒಂದು ಸರಳ ಮೆಸೇಜ್ ಕಳುಹಿಸಿ ಮಾಹಿತಿ ಪಡೆಯಬಹುದು.
- ನಿಮ್ಮ ಮೊಬೈಲ್‌ನ ಮೆಸೇಜ್ ಆಪ್ ಓಪನ್ ಮಾಡಿ.
- EPIC ನಿಮ್ಮ ವೋಟರ್ ಐಡಿ ಅರ್ಜಿ ಸಂಖ್ಯೆ ಎಂದು ಟೈಪ್ ಮಾಡಿ.
- (ಉದಾಹರಣೆಗೆ: EPIC 12345678)
- ಈ ಸಂದೇಶವನ್ನು 1950 ಹೆಲ್ಪ್‌ಲೈನ್ ಸಂಖ್ಯೆಗೆ ರವಾನಿಸಿ.
- ಕಳುಹಿಸಿದ ತಕ್ಷಣವೇ ನಿಮ್ಮ ಮತಗಟ್ಟೆ ಹಾಗೂ ವೋಟರ್ ಪಟ್ಟಿಯ ವಿವರಗಳು ಎಸ್‌ಎಂಎಸ್ ಮೂಲಕ ಲಭ್ಯವಾಗಲಿವೆ.
ಮಾರ್ಗ 3 : 'ವೋಟರ್ ಹೆಲ್ಪ್‌ಲೈನ್' ಮೊಬೈಲ್ ಆಪ್ (App)
- ಚುನಾವಣಾ ಆಯೋಗವು ಸಾರ್ವಜನಿಕರಿಗಾಗಿ Voter Helpline App ಪರಿಚಯಿಸಿದೆ.
- ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ (ಅಥವಾ https://www.eci.gov.in/voter-helpline-app ಲಿಂಕ್ ಬಳಸಿ).
- ಆಪ್ ಓಪನ್ ಮಾಡಿ 'Search in Electoral Roll' ಆಯ್ಕೆ ಮಾಡಿಕೊಂಡು ನಿಮ್ಮ ವೋಟರ್ ಐಡಿ ಕಾರ್ಡ್‌ನ QR ಕೋಡ್ ಸ್ಕ್ಯಾನ್ ಮಾಡುವ ಮೂಲಕವೂ ನಿಮ್ಮ ಹೆಸರನ್ನು ತಕ್ಷಣ ಪರಿಶೀಲಿಸಬಹುದು.
- ಇನ್ನೂ ನಿಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೆ, ತಡಮಾಡದೇ ಇದೇ ಆಪ್ ಅಥವಾ ವೆಬ್‌ಸೈಟ್ ಮೂಲಕವೇ ಹೊಸ ಮತದಾರರ ಚೀಟಿಗಾಗಿ (Form 6) ಅರ್ಜಿಯನ್ನೂ ಸಲ್ಲಿಸಬಹುದು.

