HEALTH TIPS

ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಸಂಘರ್ಷ | ಗಲ್ಫ್ ದೇಶಗಳಲ್ಲಿ ಅಮೆರಿಕದ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ

ಟೆಹರಾನ್:  ಅಮೆರಿಕ ನಡೆಸಿದ ಇತ್ತೀಚಿನ ದಾಳಿಗಳಿಗೆ ಪ್ರತೀಕಾರವಾಗಿ, ಬಹರೈನ್, ಜೋರ್ಡಾನ್ ಮತ್ತು ಕುವೈತ್‍ನಲ್ಲಿರುವ ಹಲವಾರು ಅಮೆರಿಕನ್ ಮಿಲಿಟರಿ ಸೌಲಭ್ಯಗಳು ಹಾಗೂ ನೆಲೆಗಳ ಮೇಲೆ ಡ್ರೋನ್ ದಾಳಿ ನಡೆಸಿರುವುದಾಗಿ ಇರಾನ್ ಮಿಲಿಟರಿ ಶುಕ್ರವಾರ ತಿಳಿಸಿದೆ.


ಮಧ್ಯಪ್ರಾಚ್ಯದಲ್ಲಿನ ಪ್ರಮುಖ ಬೆಳವಣಿಗೆಗಳು:

ಬಹರೈನ್‍ನಲ್ಲಿರುವ ಅಮೆಜಾನ್ ಸಂಸ್ಥೆಯ ಡೇಟಾ ಸೆಂಟರ್ ಅನ್ನು ತಾವೇ ಗುರಿಯಾಗಿಸಿಕೊಂಡಿದ್ದಾಗಿ ಇರಾನ್ ತಿಳಿಸಿದೆ. `ಅಮೆರಿಕದ ಬಾಲ-ಹಂತಕ ಸೇನೆಗೆ' ಪ್ರಮುಖ ಬೇಹುಗಾರಿಕಾ ಬೆಂಬಲ ನೀಡುತ್ತಿದ್ದ ಅಮೆರಿಕನ್ ಸಂಸ್ಥೆ ಅಮೆಜಾನ್‍ನ ಬೇಹುಗಾರಿಕಾ ಡೇಟಾ ಸೆಂಟರ್ ಕಟ್ಟಡವನ್ನು ಗುರಿಯಾಗಿಸಿಕೊಂಡು ಧ್ವಂಸಗೊಳಿಸಲಾಗಿದೆ' ಎಂದು ಇರಾನ್‍ನ ರೆವೊಲ್ಯೂಷನರಿ ಗಾರ್ಡ್ (ಐಆರ್‍ಜಿಸಿ) ಶುಕ್ರವಾರ ಹೇಳಿಕೆ ನೀಡಿದೆ.

ಕುವೈತ್‍ನಲ್ಲಿರುವ ಅಲಿ ಅಲ್-ಸಲೆಂ ವಾಯು ನೆಲೆಯ ಮೇಲೆ ಬಾಂಬ್ ದಾಳಿ ನಡೆಸಿರುವುದಾಗಿ ಐಆರ್‌ಜಿಸಿ ಹೇಳಿದೆ.

ಬಹರೈನ್ ಮತ್ತು ಜೋರ್ಡಾನ್‍ನಲ್ಲಿರುವ ಅಮೆರಿಕ ಮಿಲಿಟರಿ ನೆಲೆಗಳಲ್ಲಿ ಇಂಧನ ಸಂಗ್ರಹಣಾ ಟ್ಯಾಂಕ್‍ಗಳು, ಉಪಕರಣಗಳ ಗೋದಾಮುಗಳು ಹಾಗೂ ಸೈನಿಕರ ವಸತಿ ನಿಲಯಗಳನ್ನು ಗುರಿಯಾಗಿಸಿ ಡ್ರೋನ್ ದಾಳಿ ನಡೆಸಲಾಗಿದೆ ಎಂದು ಇರಾನ್ ಪ್ರತಿಪಾದಿಸಿದೆ.

ಇರಾನ್ ಉಡಾಯಿಸಿದ್ದ ಏಳು ಕ್ಷಿಪಣಿಗಳು ಮತ್ತು ಆರು ಡ್ರೋನ್‍ಗಳನ್ನು ಹೊಡೆದುರುಳಿಸಿರುವುದಾಗಿ ಜೋರ್ಡಾನ್ ಮಿಲಿಟರಿ ತಿಳಿಸಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries