ಕಾಸರಗೋಡು: ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ ದಾಖಲೆ ಒಳಗೊಂಡ ಪರ್ಸನ್ನು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ 8ನೇ ತರಗತಿ ವಿದ್ಯಾರ್ಥಿ ಪ್ರಾಮಾಣಿಕತೆ ಮೆರೆದಿದ್ದಾನೆ. ನೀಲೇಶ್ವರ ವಿಭವ ಶಾಲಾ ಬಳಿಯಿಂದ 15ರಷ್ಟು ದಾಖಲೆಪತ್ರಗಳನ್ನು ಹೊಂದಿದ ಪರ್ಸ್ ಚಾಯೋತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಹಾಗೂ ಶಾಲೆಯ ಎನ್‍ಸಿಸಿ ಕೆಡೆಟ್, ಪಾಲಾ ನಿವಾಸಿ ದ್ರುಪದ್‍ಗೆ ಬಿದ್ದು ಸಿಕ್ಕಿತ್ತು. ದಾಖಲೆಪತ್ರಗಳು ಆಡಕವಾಗಿರುವ ಈ ಪರ್ಸನ್ನು ದ್ರುಪದ್ ತಕ್ಷಣ ನೀಲೇಶ್ವರ ಪೆÇಲೀಸ್ ಠಾಣೆಗೆ ಹಸ್ತಾಂತರಿಸಿದ್ದಾನೆ.
ಪೊಲೀಸರು ದಾಖಲೆಪತ್ರದ ಆಧಾರದಲ್ಲಿ ಪರ್ಸ್‍ನ ವಾರಸುದಾರರಾದ ಪಾಲಕ್ಕಾಡ್ ವಾಣಿಯಾಂಕುಳಂ ನಿವಾಸಿ ಹಾಗೂ ನೀಲೇಶ್ವರ ಕೋಟಪ್ಪುರಂನಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುವ ವ್ಯಾಪಾರಿ ಕೆ.ಪಿ. ರತೀಶ್ ಕುಮಾರ್ ಅವರನ್ನು ಸಂಪರ್ಕಿಸಿ ಠಾಣೆಗೆ ಕರೆಸಿ ಪರ್ಸ್ ಹಸ್ತಾಂತರಿಸಲಾಗಿದೆ. ಠಾಣೆ ಎಸ್.ಐ ಕೆ. ಅಜಿತ್, ಜನಮೈತ್ರಿ ಬೀಟ್ ಆಫೀಸರ್ ದಿಲೀಶ್ ಕುಮಾರ್ ಅವರ ಉಪಸ್ಥಿತಿಯಲ್ಲಿ ದ್ರುಪದ್ ಪರ್ಸನ್ನು ರತೀಶ್ ಕುಮಾರ್ ಅವರಿಗೆ ಹಸ್ತಾಂತರಿಸಿದ್ದಾನೆ.

