ಕಾಸರಗೋಡು: ರಾಜಪುರಂ ಪೋಲೀಸ್ ಠಾಣೆ ವ್ಯಾಪ್ತಿಯ ಪಾಣತ್ತೂರು ಪೇಟೆಯಲ್ಲಿ ಯುವಕನೊಬ್ಬನ ಮೃತದೇಹ ತರಕಾರಿ ಅಂಗಡಿಯೊಂದರ ಸನಿಹ ಪತ್ತೆಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಪಶ್ಚಿಮಬಂಗಾಳ, ಡಾರ್ಜಿಲಿಂಗ್ ಸಿಲಿಗುರಿ ಗ್ರಾಮದ ಇಂದ್ರಕುಮಾರ್ (32) ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ 5ರಿಂದ ರಾತ್ರಿ 10ರ ಮಧ್ಯೆ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ.
ತರಕಾರಿ ಅಂಗಡಿ ಸನಿಹ ಅನಾಥವಾಗಿ ಬಿದ್ದುಕೊಂಡಿದ್ದ ಸ್ಥಿತಿಯಲ್ಲಿ ಪತ್ತಯಾಘಿದ್ದ ಯುವಕನನ್ನು ಆಸ್ಪತ್ರೆಗೆ ತಲುಪಿಸಿ ತಪಾಸಣೆ ನಡೆಸಿದಾಗ ಸಾವು ಖಚಿತಗೊಂಡಿತ್ತು. ರಾಜಾಫುರಂ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

