ಕುಂಬಳೆ: ಪ್ರಾಯಪೂರ್ತಿಯಾಗದ ಬಾಲಕಿಯನ್ನು ಹಿಂಬಾಲಿಸಿದ ಆರೋಪದಂತೆ ಕೊಡ್ಯಮ್ಮೆಯ ಖಲಂದರ್ ಶಾನಿ (26) ಎಂಬಾತನ ವಿರುದ್ಧ ಕುಂಬಳೆ ಪೋಲೀಸರು ಇನ್ನೊಂದು ಕೇಸು ದಾಖಲಿಸಿಕೊಂಡಿದ್ದಾರೆ. 16ರ ಹರೆಯದ ಬಾಲಕಿಯನ್ನು ಈತ ನಿರಂತರ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದನೆಂದು ದೂರು ನೀಡಲಾಗಿತ್ತು
16ರ ಹರೆಯದ ಇನ್ನೋರ್ವೆ ಬಾಲಕಿಗೆ ಪೋನ್‍ನಲ್ಲಿ ಸಂದೇಶಗಳನ್ನು ಕಳುಹಿಸಿ ಅಲ್ಲದೆ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಲೆತ್ನಿಸಿದ ಆರೋಪದಂತೆ ಖಲಂದರ್‍ಶಾನಿ ವಿರುದ್ಧ ಈ ಮೊದಲು ಕೇಸು ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಆತನ ಪತ್ತೆಗಾಗಿ ಪೋಲೀಸರು ಶೋಧ ನಡೆಸುತ್ತಿರುವಾಗಲೇ ಆತನ ವಿರುದ್ಧ ಇನ್ನೋರ್ವೆ ಬಾಲಕಿ ದೂರು ನೀಡಿದ್ದಾಳೆ.

