ವಾಷಿಂಗ್ಟನ್: ತನ್ನ ವಿರುದ್ಧ ಹತ್ಯೆ ಅಥವಾ ಹತ್ಯೆ ಯತ್ನ ನಡೆದರೆ ಇರಾನ್ ಅನ್ನು "ಸಂಪೂರ್ಣವಾಗಿ ನಾಶಮಾಡಿ ಧ್ವಂಸಗೊಳಿಸಲಾಗುವುದು" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಟ್ರೂತ್ ಸೋಷಿಯಲ್ ನಲ್ಲಿ ಶನಿವಾರ ಪ್ರಕಟಿಸಿದ ಪೋಸ್ಟ್ ನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, ಇರಾನ್ ಸರ್ಕಾರ ತನ್ನ ವಿರುದ್ಧ ಹತ್ಯೆ ಯತ್ನ ನಡೆಸಿದರೆ ಅಮೆರಿಕ ಸಾವಿರಾರು ಕ್ಷಿಪಣಿಗಳನ್ನು ಉಡಾಯಿಸಿ ಪ್ರತೀಕಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ ಎಂದು ಂಟರಿಚಿzeeಡಿಚಿ ವರದಿ ಮಾಡಿದೆ.
"1,000 ಕ್ಷಿಪಣಿಗಳನ್ನು ಈಗಾಗಲೇ ಗುರಿ ನಿಗದಿಪಡಿಸಿ ಸಜ್ಜುಗೊಳಿಸಲಾಗಿದೆ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸರ್ಕಾರವು ಜಗತ್ತಿನ ವಿವಿಧ ಭಾಗಗಳಲ್ಲಿ ವ್ಯಕ್ತಪಡಿಸಿರುವ ಬೆದರಿಕೆಯನ್ನು ಕಾರ್ಯರೂಪಕ್ಕೆ ತಂದು, ಅಮೆರಿಕದ ಹಾಲಿ ಅಧ್ಯಕ್ಷರನ್ನು ಹತ್ಯೆ ಮಾಡಲು ಅಥವಾ ಹತ್ಯೆಗೆ ಯತ್ನಿಸಿದರೆ, ನನ್ನ ವಿರುದ್ಧ ಇಂತಹ ಯಾವುದೇ ಕೃತ್ಯ ನಡೆದರೆ, ಅದರ ಬೆನ್ನಲ್ಲೇ ಇನ್ನೂ ಸಾವಿರಾರು ಕ್ಷಿಪಣಿಗಳನ್ನು ತಕ್ಷಣವೇ ಉಡಾಯಿಸಲಾಗುವುದು" ಎಂದು ಟ್ರಂಪ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
"ಈ ಕುರಿತು ಈಗಾಗಲೇ ಆದೇಶಗಳನ್ನು ನೀಡಲಾಗಿದೆ. ಅಮೆರಿಕದ ಸೇನೆಯು ಒಂದು ವರ್ಷದ ಅವಧಿಯಲ್ಲಿ ಇರಾನ್‌ನ ಎಲ್ಲ ಪ್ರದೇಶಗಳನ್ನು ಸಂಪೂರ್ಣವಾಗಿ ನಾಶಮಾಡಲು ಮತ್ತು ಧ್ವಂಸಗೊಳಿಸಲು ಸಿದ್ಧವಾಗಿದೆ, ಸನ್ನದ್ಧವಾಗಿದೆ ಹಾಗೂ ಅದಕ್ಕೆ ಅಗತ್ಯವಾದ ಸಂಪೂರ್ಣ ಸಾಮರ್ಥ್ಯವನ್ನು ಹೊಂದಿದೆ" ಎಂದೂ ಅವರು ಹೇಳಿದ್ದಾರೆ.
ಇರಾನ್‌ನಿಂದ ತಮ್ಮ ಜೀವಕ್ಕೆ ಅಪಾಯವಿದೆ ಎಂಬ ಆರೋಪವನ್ನು ಟ್ರಂಪ್ ಈ ಹಿಂದೆಯೂ ಹಲವು ಬಾರಿ ಮಾಡಿದ್ದರು.

