HEALTH TIPS

ವಿಬಿ-ಜಿ ರಾಮ್‌ ಜಿ: ದಿನಗೂಲಿ ಏರಿಕೆ

ನವದೆಹಲಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು 'ವಿಬಿ-ಜಿ ರಾಮ್‌ ಜಿ' ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ದಿನಗೂಲಿಯನ್ನು ಪರಿಷ್ಕರಿಸಿ ಬುಧವಾರ ಆದೇಶಿಸಿದೆ. 

ರಾಷ್ಟ್ರೀಯ ಮಟ್ಟದಲ್ಲಿ ಸರಾಸರಿ ದಿನಗೂಲಿಯನ್ನು ₹298.8ರಿಂದ ₹327.4ಕ್ಕೆ ಪರಿಷ್ಕರಿಸಲಾಗಿದೆ.

ದಿನಕ್ಕೆ ₹28.6 ಹೆಚ್ಚಳವಾಗಿದ್ದು, ರಾಷ್ಟ್ರಮಟ್ಟದಲ್ಲಿ ಸರಾಸರಿ ಶೇ 10ರಷ್ಟು ಏರಿಕೆಯಾಗಿದೆ. ಈ ಹೊಸ ಯೋಜನೆಯಡಿ ದಿನಗೂಲಿ ₹300ಕ್ಕಿಂತ ಕಡಿಮೆ ಇರುವಂತಿಲ್ಲ ಎಂದು ಸಚಿವಾಲಯ ಹೇಳಲಾಗಿದೆ.

ರಾಜ್ಯದಲ್ಲಿ ₹382ಕ್ಕೆ ಏರಿಕೆ:

ಕರ್ನಾಟಕದಲ್ಲಿ ನರೇಗಾದಡಿ 2025-26ರಲ್ಲಿ ದಿನಗೂಲಿ ₹370 ಇತ್ತು. ಅದನ್ನು ₹382ಕ್ಕೆ ಪರಿಷ್ಕರಿಸಲಾಗಿದೆ. ಅಂದರೆ ಶೇ 3.24 ಹೆಚ್ಚಳವಾಗಿದೆ.

ಹರಿಯಾಣದಲ್ಲಿ ಅತ್ಯಧಿಕ ₹409 (ಶೇ 2.25ರಷ್ಟು ಏರಿಕೆ) ದಿನಗೂಲಿ ನಿಗದಿಯಾಗಿದೆ. ಗೋವಾದಲ್ಲಿ ₹406, ಕೇರಳದಲ್ಲಿ ₹401, ತಮಿಳುನಾಡಿನಲ್ಲಿ ₹345, ಮಹಾರಾಷ್ಟ್ರದಲ್ಲಿ ₹317, ತೆಲಂಗಾಣದಲ್ಲಿ ₹308 ದಿನಗೂಲಿ ನಿಗದಿಯಾಗಿದೆ.

ಸಿಕ್ಕಿಂನ ಮೂರು ಗ್ರಾಮ ಪಂಚಾಯಿತಿಗಳಾದ ಗ್ನಾಥಾಂಗ್‌, ಲಾಚುಂಗ್, ಲಾಚೆನ್‌ಗಳಲ್ಲಿ ದಿನಕ್ಕೆ ₹450ಕ್ಕೆ ಕೂಲಿ (ವಿಶೇಷ ದರ) ಹೆಚ್ಚಿಸಲಾಗಿದೆ.

ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್‌, ಪಶ್ಚಿಮ ಬಂಗಾಳ, ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ದಿನಗೂಲಿ ಶೇ 15ರಿಂದ ಶೇ 25ರವರೆಗೆ ಏರಿಕೆಯಾಗಿದೆ ಎಂದು ಸಚಿವಾಲಯದ ತಿಳಿಸಿದೆ.

ಎರಡು ದಶಕಗಳಿಂದ ಜಾರಿಯಲ್ಲಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (ನರೇಗಾ) ಕೇಂದ್ರ ಸರ್ಕಾರ 'ವಿಬಿ-ಜಿ ರಾಮ್‌ ಜಿ' ಎಂದು ಬದಲಿಸಿದ್ದು, ಅದು ಜುಲೈ 1ರಿಂದ ಜಾರಿಗೆ ಬಂದಿದೆ. ಹಿಂದಿನ ಯೋಜನೆಯಲ್ಲಿ 100 ದಿನಗಳಿದ್ದ ಉದ್ಯೋಗ ಖಾತ್ರಿ ಇದ್ದರೆ, ಹೊಸ ಯೋಜನೆಯಲ್ಲಿ 125 ದಿನಗಳಿಗೆ ಏರಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries