HEALTH TIPS

ಭಾರತದ ಭೂಪ್ರದೇಶಗಳನ್ನು ಒಳಗೊಂಡ ನಕ್ಷೆಯನ್ನು ನಾಣ್ಯದಿಂದ ತೆಗೆಯಲ್ಲ ಎಂದ ನೇಪಾಳ

ಕಠ್ಮಂಡು: ಒಂದು ರೂಪಾಯಿ (ನೇಪಾಳೀಸ್‌ ರುಪೀ) ನಾಣ್ಯದ ಮೇಲೆ ಇರುವ ದೇಶದ ನಕ್ಷೆಯ ಚಿತ್ರವನ್ನು ಹಾಗೆಯೇ ಉಳಿಸಿಕೊಳ್ಳಲಾಗುವುದು ಎಂದು ನೇಪಾಳದ ರಾಷ್ಟ್ರೀಯ ಬ್ಯಾಂಕ್‌ ಶನಿವಾರ ತಿಳಿಸಿದೆ. ಭಾರತದ ಲಿಂಪಿಯಾಧುರ, ಲಿಪುಲೇಖ್‌ ಮತ್ತು ಕಾಲಪಾನಿ ಪ್ರದೇಶಗಳನ್ನು ಒಳಗೊಂಡ ನೇಪಾಳದ ನಕ್ಷೆ ಸದ್ಯ ಆ ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಮೇಲಿದೆ.


ಈ ಪ್ರದೇಶಗಳು ತನಗೆ ಸೇರಿದ್ದು ಎಂದು ನೇಪಾಳ ಹೇಳಿಕೊಂಡಿದೆ. ಆದರೆ, ಇವು ಉತ್ತರಾಖಂಡದ ಅವಿಭಾಜ್ಯ ಅಂಗ ಎಂದು ಭಾರತ ಪ್ರತಿಪಾದಿಸಿದೆ. ಹಾಗೆಯೇ, ಈ ವಿಚಾರವನ್ನು ದ್ವಿಪಕ್ಷೀಯ ಮಾತುಕತೆ ಮೂಲಕ ಇತ್ಯರ್ಥಪಡಿಸಬೇಕು ಎಂದು ಹೇಳಿದೆ.

ಮೇಲಿನ ಪ್ರದೇಶಗಳನ್ನು ಸೇರಿಸಲಾದ ನೇಪಾಳದ ಅಧಿಕೃತ ನಕ್ಷೆಯನ್ನು ನಾಣ್ಯದ ಮೇಲೆ ಚಿತ್ರಿಸಲು ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ನೇತೃತ್ವದ ಸರ್ಕಾರ 2020ರ ಮೇ ತಿಂಗಳಲ್ಲಿ ಅನುಮೋದನೆ ನೀಡಿತ್ತು. ಆ ಪ್ರದೇಶಗಳು ತಮ್ಮವೇ ಎಂದು ತೋರಿಸುವ ಉದ್ದೇಶ ಅದರ ಹಿಂದೆ ಇತ್ತು.

ನಾಣ್ಯದ ಮೇಲಿದ್ದ ನಕ್ಷೆಯನ್ನು ಬದಲಿಸಲು ಅಲ್ಲಿನ ಸರ್ಕಾರ ಜುಲೈ 20 ರಂದು ಅನುಮೋದನೆ ನೀಡಿತ್ತು. ಆದರೆ ವಿರೋಧ ಪಕ್ಷ ಮತ್ತು ಸಾರ್ವಜನಿಕರ ಒತ್ತಡ ಹೆಚ್ಚಾದ ಕಾರಣ, ನಿರ್ಧಾರ ಕೈಬಿಡಲಾಗಿದೆ. ನಾಣ್ಯದ ಮೇಲೆ ನಕ್ಷೆಯನ್ನು ಉಳಿಸಿಕೊಳ್ಳಲಾಗುವುದು ಎಂದು ನೇಪಾಳ ರಾಷ್ಟ್ರೀಯ ಬ್ಯಾಂಕ್‌ ವಕ್ತಾರ ಗುರು ಪ್ರಸಾದ್‌ ಪೌಡೆಲ್‌ ತಿಳಿಸಿದ್ದಾರೆ.

ನಾಣ್ಯದ ಹೊಸ ವಿನ್ಯಾಸವು ಕೇಂದ್ರ ಬ್ಯಾಂಕ್‌ಗೆ ಅಧಿಕೃತವಾಗಿ ಲಭ್ಯವಾಗಿಲ್ಲ. ಆದಾಗ್ಯೂ, ಅದರ ಮೇಲೆ ನಕ್ಷೆ ಇರಲಿದೆ ಎಂಬುದನ್ನು ಖಚಿತಪಡಿಸುತ್ತೇನೆ ಎಂದಿರುವ ಪೌಡೆಲ್‌, ನಾಣ್ಯದ ಗಾತ್ರ ಬದಲಿಸಲಾಗುವುದು. ಮೊದಲಿಗಿಂತ ಚಿಕ್ಕದಾಗಿ, ಹಗುರವಾಗಿ ಇರುತ್ತದೆ ಎಂದೂ ಹೇಳಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries