ಮಂಜೇಶ್ವರ: ವರ್ಕಾಡಿ ಶ್ರೀ ಕಾವೀಃ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೂಡಂಬೈಲಿನ ವಾಗ್ದೇವೀ ಯಕ್ಷಗಾನ ಕಲಾಸಂಘದವರಿಂದ "ಭಾರ್ಗವ ವಿಜಯ" ಎಂಬ ಕಥಾಭಾಗದ ತಾಳಮದ್ದಳೆ ಜರಗಿತು.ಪಾತ್ರವರ್ಗದಲ್ಲಿ ರಾಜಾರಾಮ್ ರಾವ್ ಮೀಯಪದವು, ನಾರಾಯಣ ನಾವಡ ಮೂಡಂಬೈಲು, ಚಂದ್ರಕುಮಾರ್ ಬಲಿಪಗುಳಿ, ಶಾಶ್ವತಿ ನಾವಡ ಮೂಡಂಬೈಲು ಹಾಗೂ ಶಾರ್ವರಿ ನಾವಡ ಮೂಡಂಬೈಲು ಭಾಗವಹಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಶಶಿಧರ ಭಟ್ ಚಿತ್ರಾಪು ಹಾಗೂ ವಾಸುದೇವ ಮಯ್ಯ ವರ್ಕಾಡಿ, ಚೆಂಡೆಯಲ್ಲಿ ಸ್ಕಂದರಾಜ್ ಮಯ್ಯ ವರ್ಕಾಡಿ ಮತ್ತು ಮೃದಂಗದಲ್ಲಿ ಶ್ರೀರಾಮ ಹೊಳ್ಳ ಸುರತ್ಕಲ್ ಸಹಕರಿಸಿದರು.

.jpg)
