ಉಪ್ಪಳ: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಅರಬಿ ಭಾಷಾ ಕೌಶಲ್ಯವನ್ನು ವೃದ್ಧಿಪಡಿಸಲು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ, ಸಾರ್ವಜನಿಕ ಶಿಕ್ಷಣ ನಿರ್ದೇಶಕರ ಅನುಮೋದನೆಯೊಂದಿಗೆ ಶಾಲಾ ಹಂತದಿಂದ ರಾಜ್ಯ ಮಟ್ಟದವರೆಗೆ ಕೇರಳ ಅರಬಿಕ್ ಟೀಚರ್ಸ್ ಫೆಡರೇಶನ್ (ಕೆಟಿಎಫ್) ನೇತೃತ್ವದಲ್ಲಿ ನಡೆಯುವÀಲಿಫ್ ಅರೆಬಿಕ್ ಟ್ಯಾಲೆಂಟ್ ಟೆಸ್ಟ್ ಮತ್ತು ಭಾಷಾ ಅನುಸ್ಮರಣ ಕಾರ್ಯಕ್ರಮವನ್ನು ಮಂಜೇಶ್ವರ ಉಪಜಿಲ್ಲೆ ವತಿಯಿಂದ ಉಪ್ಪಳದ ಮುಳಿಂಜ ಸರ್ಕಾರಿ ಎಲ್.ಪಿ. ಶಾಲೆಯಲ್ಲಿ ಆಯೋಜಿಸಲಾಯಿತು.
ಉಪಜಿಲ್ಲೆಯ ವಿವಿಧ ಶಾಲೆಗಳಿಂದ ಎಲ್.ಪಿ., ಯು.ಪಿ., ಹೈಸ್ಕೂಲ್ ಹಾಗೂ ಹೈಯರ್ ಸೆಕೆಂಡರಿ ವಿಭಾಗಗಳ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮವನ್ನು ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹ್ಮಾನ್ ಉದ್ಘಾಟಿಸಿದರು. ಉಪಜಿಲ್ಲಾ ಅಧ್ಯಕ್ಷ ಇಬ್ರಾಹಿಂ ಕರೀಂ ಉಪ್ಪಳ ಅಧ್ಯಕ್ಷತೆ ವಹಿಸಿದರು. ಪಂಚಾಯತಿ ಬೀಬಿ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಉಪಜಿಲ್ಲಾ ಶಿಕ್ಷಣಾಧಿಕಾರಿ ನಾರಾಯಣ ದೇಲಂಪಾಡಿ, ಬ್ಲಾಕ್ ಕಾರ್ಯಕ್ರಮ ಸಂಯೋಜಕ ರಾಜಗೋಪಾಲನ್, ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ, ರಾಜ್ಯ ಕೌನ್ಸಿಲರ್ ಯೂಸುಫ್ ವಿ.ಪಿ., ಬಶೀರ್ ಕಳಿಯೂರು, ರಿಯಾಸ್ ವಾಫಿ ಹಾಗೂ ಸಾಬಿತಾ ಟೀಚರ್ ಮಾತನಾಡಿದರು. ಉಪಜಿಲ್ಲಾ ಕಾರ್ಯದರ್ಶಿ ಶಾಹಿದ್ ಸ್ವಾಗತಿಸಿ, ಕನ್ವೀನರ್ ನೌಷಾದ್ ಎಂ.ಟಿ. ವಂದಿಸಿದರು.

.jpg)
.jpg)
