ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ವನ್ ತರಗತಿಯ ಹೊಸ ಎನ್.ಸಿ.ಸಿ. ಆರ್ಮಿ ಕೆಡೆಟ್ಸ್ ಗಳ ಆಯ್ಕೆ ಪ್ರಕ್ರಿಯೆ ಶುಕ್ರವಾರ ನಡೆಯಿತು.
ಪಯ್ಯನ್ನೂರು 32 ಕೇರಳ ಬೆಟಾಲಿಯನ್ ಕಮಾಂಡಿಂಗ್ ಆಫೀಸರ್ ಕರ್ನಲ್ ಅರುಣ್ ವಿಜಯನ್ ಹಾಗೂ ಇಬ್ಬರು ಅಧಿಕಾರಿಗಳು ವಿದ್ಯಾರ್ಥಿಗಳ ಭೌತಿಕ ಪರಿಶೀಲನೆ ಹಾಗೂ ಇತರ ಪರೀಕ್ಷೆಗಳ ಮೂಲಕ ಆಯ್ಕೆ ಪ್ರಕ್ರಿಯೆ ಮುನ್ನಡೆಸಿದರು. ಕರ್ನಲ್ ಅರುಣ್ ವಿಜಯನ್ ಅವರು ಗಾಂಧಿ ಮಂಟಪದಲ್ಲಿ ಗಾಂಧಿ ಪ್ರತಿಮೆಗೆ ಹಾರರ್ಪಣೆ ಮಾಡಿ ಶಾಲಾ ಆಡಿಟೋರಿಯಂನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಿಸ್ತು ಮತ್ತು ದೇಶಪ್ರೇಮ ಹಾಗೂ ಮೌಲ್ಯಗಳನ್ನು ತಿಳಿಸಿದರು. ಶಾಲೆಯ ಎನ್.ಸಿ.ಸಿ. ಚಟುವಟಿಕೆಗಳಿಗೆ ಮೆಚ್ಚುಗೆ ಸೂಚಿಸಿ ಕೆಡೆಟ್ ಳಿಗೆ ಸಿಹಿತಿಂಡಿ ವಿತರಿಸಿದರು.
ಸಾಧನೆ ಮಾಡಿದ ಶಾಲೆಯ ಹಿರಿಯ ಎನ್.ಸಿ.ಸಿ. ಕೆಡೆಟ್ಸ್ ಗಳನ್ನು ಗೌರವಿಸಲಾಯಿತು. ಶಾಲಾ ಎನ್.ಸಿ.ಸಿ. ಘಟಕದ ವತಿಯಿಂದ ಕರ್ನಲ್ ಅವರಿಗೆ ಶಾಲು, ಫಲ ಪುಷ್ಪ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲೆಯ ಎನ್.ಸಿ.ಸಿ. ಅಧಿಕಾರಿ ಕ್ಯಾಪ್ಟನ್ ಈಶ್ವರ ನಾಯಕ್ ಸ್ವಾಗತಿಸಿದರು. ಪ್ರಾಂಶುಪಾಲರಾದ ಪದ್ಮನಾಭ ಶೆಟ್ಟಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ವಾಣಿ ಕೆ.ವಂದಿಸಿದರು.

.jpg)
.jpg)
