HEALTH TIPS

| ಜನನ ದರದಲ್ಲಿ ಭಾರೀ ಇಳಿಕೆ : ವರದಿ

 ತಿರುವನಂತಪುರ: ಕೇರಳಂನಲ್ಲಿ ಕಚ್ಚಾ ಜನನ ಪ್ರಮಾಣ ದರವು ಇದೇ ಮೊದಲ ಬಾರಿಗೆ ಒಂದಂಕಿಗೆ ತಲುಪಿರುವುದಾಗಿ ರಾಜ್ಯ ಆರ್ಥಿಕ ಹಾಗೂ ಅಂಕಿಅಂಶ ಇಲಾಖೆಯು ಶುಕ್ರವಾರ ಪ್ರಕಟಿಸಿದೆ. 


2024ರ ಮಹತ್ವದ ಅಂಕಿಅಂಶ ವರದಿ ತಿಳಿಸಿದೆ. ಇತ್ತೀಚಿನ ದಶಕಗಳಿಗೆ ಹೋಲಿಸಿದರೆ 2023 ಹಾಗೂ 2024ರಲ್ಲಿ ಕಚ್ಚಾ ಜನನ ಪ್ರಮಾಣದರವು ಸತತವಾಗಿ ತೀವ್ರ ಇಳಿಮುಖದೆಡೆಗೆ ಸಾಗಿರುವುದನ್ನು ಈ ದತ್ತಾಂಶಗಳು ಬೆಟ್ಟು ಮಾಡಿ ತೋರಿಸಿವೆ.

ನಿಗದಿತ ವರ್ಷದಲ್ಲಿ ಪ್ರತಿ 1 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ಮಕ್ಕಳ ಜನನ ಪ್ರಮಾಣವನ್ನು ಸಿಬಿಆರ್ ಎಂದು ಕರೆಯಲಾಗುತ್ತದೆ.

ವರದಿಯ ಮುಖ್ಯಾಂಶಗಳು: 2024ರಲ್ಲಿ ಕೇರಳದ ಕಚ್ಚಾ ಜನನ ದರ (ಸಿಬಿಆರ್) 9.64ಕ್ಕೆ ಇಳಿದಿದ್ದು, ಇದೇ ಮೊದಲ ಬಾರಿಗೆ 10ಕ್ಕಿಂತ ಕೆಳಗೆ ಕುಸಿದಿದೆ. 2023ರಲ್ಲಿ ಅದು 11.06 ಆಗಿತ್ತು.

2024ರಲ್ಲಿ 3,44,766 ಶಿಶುಗಳು ಕೇರಳದಲ್ಲಿ ಜನಿಸುವ ಮೂಲಕ ಸಾರ್ವಜನಿಕ ಕುಸಿತವನ್ನು ಕಂಡಿದೆ. 2023ರಲ್ಲಿ ಶಿಶುಗಳ ಕಚ್ಚಾ ಜನನ ಪ್ರಮಾಣವು 3,93,231 ಆಗಿತ್ತು.

ಆಲಪ್ಪುಝ ಜಿಲ್ಲೆಯಲ್ಲಿ 5.28 ಕನಿಷ್ಠ ಕಚ್ಚಾ ಜನನ ಪ್ರಮಾಣದ ದರ ದಾಖಲಾಗಿದ್ದು ಇದು ರಾಜ್ಯದಲ್ಲೇ ಅತ್ಯಂತ ಕನಿಷ್ಠವಾಗಿದೆ. 6.63 ಕಚ್ಚಾ ಜನನ ದರದೊಂದಿಗೆ ಕೊಲ್ಲಂ ಜಿಲ್ಲೆ ದ್ವಿತೀಯ ಸ್ಥಾನಿಯಾಗಿದೆ. ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್ ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ಸಿಬಿಆರ್ 10ಕ್ಕಿಂತ ಅಧಿಕವಿದೆ. 15.2 ಸಿಬಿಆರ್‌ನೊಂದಿಗೆ ಮಲಪ್ಪುರಂ ಜಿಲ್ಲೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಕೋವಿಡ್ ಬಳಿಕ ಕಚ್ಚಾ ಮರಣ ದರವೂ ಇಳಿಮುಖ

ಕೋವಿಡ್-18 ಸಾಂಕ್ರಾಮಿಕದ ಬಳಿಕ ಕೇರಳದಲ್ಲಿ ಕಚ್ಚಾ ಮರಣ ದರ (ಸಿಡಿಆರ್ ) ಇಳಿಮುಖವಾಗಿದೆ. ಸಿಡಿಆರ್ 2021ರಲ್ಲಿ 9.66 ಹಾಗೂ 2022ರಲ್ಲಿ 9.16 ಆಗಿತ್ತು. 2024ರಲ್ಲಿ ಸಿಡಿಆರ್ 8.77 ಆಗಿದ್ದರೆ, 2023ರಲ್ಲಿ 8.59 ಆಗಿತ್ತು. ಆದರೆ 2024ರಲ್ಲಿ ಸಿಡಿಆರ್ 8.77 ಆಗಿದ್ದು, 2023ರಲ್ಲಿದ್ದುದಕ್ಕಿಂತ (8.59) ತುಸು ಅಧಿಕವಾಗಿದೆ. 2010ರಿಂದೀಚೆಗೆ ಕೇರಳದಲ್ಲಿ ಕಚ್ಚಾ ಮರಣದಂರವು 6.88 ಆಗಿದ್ದು, 2021ರ ಕೋವಿಡ್ ಹಾವಳಿಯವರೆಗೂ ಹೆಚ್ಚು ಕಮ್ಮಿ ಒಂದು ಪ್ರಮಾಣದ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿತ್ತು. ಕೊಟ್ಟಾಯಂ ಜಿಲ್ಲೆಯಲ್ಲಿ ಸಿಡಿಆರ್ ರಾಜ್ಯದಲ್ಲೇ ಗರಿಷ್ಠ (12.39) ಆಗಿದ್ದರೆ, ಮಲಪ್ಪುರಂನಲ್ಲಿ ಅತ್ಯಂತ ಕನಿಷ್ಠ (5.24)ವಾಗಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries