HEALTH TIPS

ಸಮಾನತೆ ಹಕ್ಕು | ಇಷ್ಟಕ್ಕೆ ತಕ್ಕಂತೆ ಬಳಸದಿರಿ: ಬಾಂಬೆ ಹೈಕೋರ್ಟ್‌

ಮುಂಬೈ : 'ಸಮಾನತೆಯ ಹಕ್ಕನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ಮಾತ್ರ ಬಳಸಿಕೊಳ್ಳಲು ಸಾಧ್ಯವಿಲ್ಲ.ಒಂದು ಕುಟುಂಬ ಹಿಂದಿನಂತೆ ಜೀವನಶೈಲಿಯನ್ನು ಮುಂದುವರಿಸ ಬೇಕಾದರೆ ದುಡಿಯುವ ಪತಿ ಹಾಗೂ ಪತ್ನಿ ಇಬ್ಬರೂ ಮನೆ ಖರ್ಚು, ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸಬೇಕು' ಎಂದು ಬಾಂಬೆ ಹೈಕೋರ್ಟ್‌ ಸೂಚಿಸಿದೆ. 


ಕುಟುಂಬದಿಂದ ದೂರವಿರುವ ಪತ್ನಿ ಮತ್ತು ಮಗನಿಗೆ ನೀಡಬೇಕಾದ ಮಾಸಿಕ ಜೀವನಾಂಶವನ್ನು ಕಡಿಮೆ ಮಾಡುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್‌ ಈ ಮಹತ್ವದ ಆದೇಶ ನೀಡಿದೆ.

ನ್ಯಾಯಮೂರ್ತಿ ಎಂ.ಎಂ. ಸತಾಯೆ ನೇತೃತ್ವದ ಏಕಸದಸ್ಯ ಪೀಠವು, 'ಪತ್ನಿ ಹಾಗೂ ಮಗನಿಗೆ ಮಾಸಿಕ ₹50 ಸಾವಿರ ಜೀವನಾಂಶವನ್ನು ನೀಡಬೇಕು' ಎಂದು ಕೌಟುಂಬಿಕ ನ್ಯಾಯಾಲಯವು 2025ರ ಜನವರಿಯಲ್ಲಿ ನೀಡಿದ್ದ ಆದೇಶವನ್ನು ರದ್ದುಗೊಳಿಸಿ, ಈ ಮೊತ್ತವನ್ನು ₹25 ಸಾವಿರಕ್ಕೆ ಕಡಿಮೆ ಮಾಡಿ ಕಳೆದ ವಾರ ಆದೇಶಿಸಿದೆ.

ಮುಂಬೈನ ಅಂಧೇರಿ ಪ್ರದೇಶದಲ್ಲಿ ಪತ್ನಿ ಮತ್ತು ಮಗ ವಾಸಿಸುತ್ತಿರುವ ಮನೆ ಹಾಗೂ ನವಿ ಮುಂಬೈನ ಪನ್ವೇಲ್‌ ನಲ್ಲಿರುವ ಇನ್ನೊಂದು ಮನೆಯ ಮಾಸಿಕ ಕಂತು (ಇಎಂಐ) ಅನ್ನು ಅರ್ಜಿದಾರರೇ ಪಾವತಿಸುತ್ತಿರುವುದನ್ನು ಪೀಠವು ಗಮನಿಸಿದೆ. ಅರ್ಜಿದಾರರು ಸದ್ಯ ಬಿಹಾರದಲ್ಲಿ ವಾಸಿಸುತ್ತಿದ್ದಾರೆ.

'ಇಎಂಐ ಕಂತು ಕಟ್ಟಲು ಪತ್ನಿಯು ಯಾವುದೇ ಹಣಕಾಸಿನ ನೆರವು ನೀಡುತ್ತಿಲ್ಲ' ಎಂದು ಪೀಠ ಉಲ್ಲೇಖಿಸಿದೆ.

'ಆರ್ಥಿಕ ಹೊರೆಯನ್ನು ತಗ್ಗಿಸಲುಅಂಧೇರಿಯಲ್ಲಿರುವ ಮನೆಯನ್ನು ಮಾರಾಟ ಮಾಡಿ ಬಿಹಾರದಲ್ಲಿರುವ ಮನೆಗೆ ಅಥವಾ ಪನ್ವೇಲ್‌ನಲ್ಲಿರುವ ಮನೆಗೆ ಸ್ಥಳಾಂತರಗೊಳ್ಳುವಂತೆ ಅರ್ಜಿ ದಾರರು ತನ್ನ ಪತ್ನಿಗೆ ವಿನಂತಿಸಿದ್ದರು. ಆದರೆ, ಪತ್ನಿ ನಿರಾಕರಿಸಿದ್ದರು. ಅರ್ಜಿದಾರರ ವಿನಂತಿಯಲ್ಲಿ ಯಾವುದೇ ದೋಷ ಕಂಡುಬರುವುದಿಲ್ಲ' ಎಂದು ಪೀಠ ಹೇಳಿದೆ.

'ವೈವಾಹಿಕ ಕಲಹದಲ್ಲಿ, ಪತ್ನಿಯು ಇಎಂಐ ಕಂತು ಕಟ್ಟದೆ ಅಥವಾ ತನ್ನ ಸಂಪಾದನೆಯ ಹಣ ನೀಡದೆ ಅಂಧೇರಿಯಂತಹ ಅತ್ಯಂತ ದುಬಾರಿ ಪ್ರದೇಶದಲ್ಲಿ ಐಷಾರಾಮಿ ಜೀವನ ನಡೆಸ ಬೇಕೆಂದು ಬಯಸುವುದಾದರೆ, ಈಗಾ ಗಲೇ ಮನೆಯ ಸಂಪೂರ್ಣ ಇಎಂಐ ಕಂತು ಕಟ್ಟುತ್ತಿರುವ ಪತಿಯು, ಆ ಇಎಂಐ ಹೊರೆ ತನಗೆ ಹೆಚ್ಚಾಗಿದೆ ಎಂಬ ಕಾರಣ ನೀಡಿ ಪತ್ನಿಗೆ ನೀಡ ಬೇಕಾದ ಜೀವನಾಂಶವನ್ನು ಕಡಿಮೆ ಮಾಡುವಂತೆ ಕೋರ್ಟ್‌ಗೆ ವಿನಂತಿಸುವುದರಲ್ಲಿ ತಪ್ಪಿಲ್ಲ' ಎಂದು ಪೀಠ ಹೇಳಿದೆ.

'ಕೋವಿಡ್‌-19 ಸಮಯದಲ್ಲಿ ಕೆಲಸ ಕಳೆದುಕೊಂಡೆ. ಈಗ ತೀರಾ ಕಡಿಮೆ ಸಂಬಳದ ಕೆಲಸ ಮಾಡುತ್ತಿದ್ದು, ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದೇನೆ' ಎಂದು ಅರ್ಜಿದಾರರು ತಿಳಿಸಿದ್ದರು.

'ಕೋವಿಡ್‌-19 ಸಾಂಕ್ರಾಮಿಕ ರೋಗ ಅನೇಕ ಜನರ ವೃತ್ತಿಪರ ಜೀವನ ಮತ್ತು ವ್ಯವಹಾರಗಳ ಮೇಲೆ ಪರಿಣಾಮ ಬೀರಿದೆ' ಎಂದು ಪೀಠ ಹೇಳಿದೆ.

ಪತಿ, ಪತ್ನಿ ಸಂಪಾದಿಸುತ್ತಿದ್ದರೆ ಮತ್ತು ತಮ್ಮ ಮಗುವಿಗೆ ಉತ್ತಮ ಶಿಕ್ಷಣ ಸಿಗಬೇಕೆಂದು ಬಯಸಿದರೆ, ಇಬ್ಬರೂ ಅದರ ಖರ್ಚು ಭರಿಸಬೇಕಾಗುತ್ತದೆ ಎಂ.ಎಂ.ಸತಾಯೆ, ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ

ಎಂ.ಎಂ.ಸತಾಯೆ, ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಪತಿ, ಪತ್ನಿ ಸಂಪಾದಿಸುತ್ತಿದ್ದರೆ ಮತ್ತು ತಮ್ಮ ಮಗುವಿಗೆ ಉತ್ತಮ ಶಿಕ್ಷಣ ಸಿಗಬೇಕೆಂದು ಬಯಸಿದರೆ, ಇಬ್ಬರೂ ಅದರ ಖರ್ಚು ಭರಿಸಬೇಕಾಗುತ್ತದೆ.








.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries