HEALTH TIPS

ವ್ಯಭಿಚಾರದ ಆರೋಪ ಹೊತ್ತಿರುವ ಸಂಗಾತಿ ಗೋಪ್ಯತೆಯ ಹಕ್ಕು ಪ್ರತಿಪಾದಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ವ್ಯಭಿಚಾರವನ್ನು ಸಾಬೀತುಪಡಿಸಲು ಸಂಗಾತಿಗೆ ಮೊಬೈಲ್ ಕರೆ ದಾಖಲೆಗಳು ಮತ್ತು ಹೋಟೆಲ್ ವಾಸ್ತವ್ಯದ ವಿವರಗಳನ್ನು ನೀಡುವುದನ್ನು ನಿರಾಕರಿಸಲು ಸಂವಿಧಾನದ 21ನೇ ವಿಧಿ ಅಡಿಯ ಗೋಪ್ಯತೆಯ ಹಕ್ಕನ್ನು ಒಂದು ಗುರಾಣಿಯಾಗಿ ಬಳಸಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಹೇಳಿದೆ.

ಇಂತಹ ಮಾಹಿತಿಯನ್ನು ನ್ಯಾಯಾಲಯದಲ್ಲಿ ಬಹಿರಂಗಪಡಿಸುವುದು ತನ್ನ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಪ್ರತಿಪಾದಿಸಿದ್ದ ವ್ಯಕ್ತಿಯ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.

ಗೋಪ್ಯತೆಯ ಹಕ್ಕು ಸಂಪೂರ್ಣವಲ್ಲ ಮತ್ತು ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ಪ್ರಕರಣಗಳಲ್ಲಿ ಇದು ಕೆಲವು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ ಎಂಬ ದಿಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ಕೆ.ವಿನೋದ ಚಂದ್ರನ್ ಅವರ ಪೀಠವು ಎತ್ತಿ ಹಿಡಿಯಿತು. ವಿವಾಹದ ಹೊರಗೆ ಪರಸ್ಪರ ಒಪ್ಪಿಗೆಯ ಲೈಂಗಿಕ ಸಂಬಂಧವನ್ನು ಹೊಂದುವ ಸ್ವಾತಂತ್ರ್ಯಕ್ಕೆ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ರಕ್ಷಣೆ ನೀಡಲು ಬರುವುದಿಲ್ಲ ಎಂದು ಈ ಹಿಂದೆ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠವು ನೀಡಿದ್ದ ಆದೇಶವನ್ನು ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಹಿಂದೂ ವಿವಾಹ ಕಾಯ್ದೆಯು ವ್ಯಭಿಚಾರವನ್ನು ವಿಚ್ಛೇದನಕ್ಕೆ ನಿರ್ದಿಷ್ಟ ಆಧಾರವಾಗಿ ಗುರುತಿಸುತ್ತದೆ. ಆದ್ದರಿಂದ ನ್ಯಾಯಾಲಯವು ವೈವಾಹಿಕ ಜೀವನದ ಹೊರಗೆ ಲೈಂಗಿಕ ಸಂಬಂಧದಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಆರೋಪಿಸಲಾದ ವಿವಾಹಿತ ವ್ಯಕ್ತಿಗೆ ಗೋಪ್ಯತೆಯ ಹಕ್ಕಿನ ಆಧಾರದಲ್ಲಿ ನೆರವಾಗುವುದು ಸಾರ್ವಜನಿಕ ಹಿತಾಸಕ್ತಿಗೆ ತಕ್ಕುದಲ್ಲ ಎಂದು ಉಚ್ಚ ನ್ಯಾಯಾಲಯವು ಎತ್ತಿ ಹಿಡಿದಿತ್ತು.

ವ್ಯಕ್ತಿಯ ಹೋಟೆಲ್ ವಾಸ್ತವ್ಯದ ಕಾಯ್ದಿರಿಸುವಿಕೆ ವಿವರಗಳು ಮತ್ತು ಕರೆ ವಿವರಗಳ ದಾಖಲೆಗಳನ್ನು ಪತ್ನಿಗೆ ಒದಗಿಸುವಂತೆ ಕುಟುಂಬ ನ್ಯಾಯಾಲಯವು ನೀಡಿದ್ದ ಆದೇಶವನ್ನು ಉಚ್ಚ ನ್ಯಾಯಾಲಯವು ಅನುಮೋದಿಸಿತ್ತು. ಇದರ ವಿರುದ್ಧ ಪತಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದ.

ಈ ದಂಪತಿಗಳು 1998ರಲ್ಲಿ ವಿವಾಹವಾಗಿದ್ದು, 2000ರಲ್ಲಿ ಹೆಣ್ಣು ಮಗು ಜನಿಸಿತ್ತು. ಬಳಿಕ ತನ್ನ ಪತಿ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನ್ನು ಮತ್ತು ಜೈಪುರದ ಹೋಟೆಲ್ಲೊಂದರಲ್ಲಿ ಒಟ್ಟಿಗೆ ತಂಗಿದ್ದನ್ನು ಪತ್ನಿ ಪತ್ತೆ ಹಚ್ಚಿದ್ದರು. ಬಳಿಕ ಆಕೆ ಆತನ ವಿರುದ್ಧ ಪ್ರಕರಣ ದಾಖಲಿಸಿ ವಿಚ್ಛೇದನ ಕೋರಿದ್ದರು.

ಕುಟುಂಬ ನ್ಯಾಯಾಲಯ ಮತ್ತು ದಿಲ್ಲಿ ಉಚ್ಚ ನ್ಯಾಯಾಲಯ ಹೊರಡಿಸಿದ ಆದೇಶದಲ್ಲಿ ಯಾವುದೇ ತಪ್ಪಿಲ್ಲ ಎಂಬ ಪತ್ನಿಯ ಪರ ವಕೀಲರ ವಾದವನ್ನು ಸರ್ವೋಚ್ಚ ನ್ಯಾಯಾಲಯವು ಪುರಸ್ಕರಿಸಿತು.

ವ್ಯಭಿಚಾರವನ್ನು ಸಾಬೀತುಪಡಿಸಲು ಕರೆ ವಿವರಗಳು ಮತ್ತು ಹೋಟೆಲ್ ವಾಸ್ತವ್ಯದ ಮಾಹಿತಿ ಅಗತ್ಯವಾಗಿತ್ತು ಎಂದು ವಕೀಲರು ವಾದಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries