HEALTH TIPS

ಮಲ್ಲ-ಮಂಗಳೂರು ಬಸ್ ಸೇವೆ ಪುನರಾರಂಭಕ್ಕೆ ಮನವಿ

ಕಾಸರಗೋಡು: ಮಲ್ಲ-ಮಂಗಳೂರು ಮಧ್ಯೆ ಕೆಎಸ್‍ಆರ್‍ಟಿಸಿ ಬಸ್ ಸೇವೆಯನ್ನು ಪುನರಾರಂಭಿಸುವಂತೆ ಸಾರಿಗೆ ಸಚಿವ ಸಿ.ಪಿ ಜಾನ್ ಅವರಿಗೆ ಮುಳಿಯಾರು ಗ್ರಾಮ ಪಂಚಾಯಿತಿ ಸ್ಥಾಯೀ ಸಮಿತಿ ಅಧ್ಯಕ್ಷೆ  ಅನೀಸಾ ಮನ್ಸೂರ್ ಮಲ್ಲತ್ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು. 


ಮಲ್ಲ ಕ್ಷೇತ್ರದಿಂದ ಬೆಳಗ್ಗೆ 5.30ಕ್ಕೆ ಹೊರಟು ಮಂಗಳೂರು ಸಂಚರಿಸುವ ಬಸ್ ಸಂಜೆ ಸಂಜೆ 7.45ಕ್ಕೆ ಆಗಮಿಸಿ ಇಲ್ಲಿ ತಂಗುತ್ತಿದ್ದ ಬಸ್ ಕರೊನಾ ಕಾಲಾವಧಿಯಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ. ಮಲ್ಲ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಹಾಗೂ ಈ ಪ್ರದೇಶದಿಂದ ಉನ್ನತ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಹೆಚ್ಚಿನ ಪ್ರಯೋಜನಕಾರಿಯಾಗಿದ್ದ ಪ್ರಸಕ್ತ ಬಸ್ ಸೇವೆಯನ್ನು ಮರುಸ್ಥಾಪಿಸುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು. 

ಎಸ್‍ಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಶೆರೀಫ್ ಕೊಡವಂಚಿ, ವಾರ್ಡು ಮುಸ್ಲಿಂಲೀಗ್ ಅಧ್ಯಕ್ಷ ಹಮೀದ್ ಮಲ್ಲಂ, ಪ್ರಧಾನ ಕಾರ್ಯದರ್ಶಿ  ಶೆರೀಫ್ ಮಲ್ಲತ್ ತಂಡದಲ್ಲಿದ್ದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries