ಕಾಸರಗೋಡು: ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸೆ. 4ರಂದು ಜರುಗಲಿರುವ 46 ನೇ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವದ ಸಮಿತಿ ರಚನಾ ಸಭೆ ಕಾಸರಗೋಡು ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಜರುಗಿತು. ಗೊಕುಲ ಜಿಲ್ಲಾ ರಕ್ಷಾಧಿಕಾರಿ ಜಯರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಉತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ವೇಣುಗೋಪಾಲ್ ಕೆ.ಎನ್ ಅಧ್ಯಕ್ಷ, ಮೋದಕ್ ರಾಜ್, ಶ್ರೀವಳ್ಳಿ ಉಪಾಧ್ಯಕ್ಷರು, ರಾಜೇಂದ್ರ ಕುಂಟಾರು ಪ್ರಧಾನ ಕಾರ್ಯದರ್ಶಿ, ವಸಂತ್ ಕೆರೆಮನೆ, ಪ್ರಶಾಂತಿ ನೆಲ್ಲಿಕುಂಜೆ ಜತೆಕಾರ್ಯದರ್ಶಿಗಳು, ಮೋಹನ್ ರಾಜ್ ಕಾಳ್ಯಂಗಾಡ್ ಕೋಶಾಧಿಕಾರಿ, ರವಿ ಕೇಸರಿ, ರಾಮಕೃಷ್ಣ ಹೊಳ್ಳ, ಗುಣಪಾಲ ಅಮೈ, ಸತೀಶ್ ಕಾಮತ್, ಕಿಶೋರ್ ಕುಮಾರ್ ಎಸ್.ವಿ.ಟಿ ಕಾಯಂ ಸಮಿತಿ ಸದಸ್ಯರು, ಸುರೇಶ್, ವರಪ್ರಸಾದ್ ಕೋಟೆಕಣಿ, ಉಷಾ ಸುರೇಶ್, ಗಣೇಶ್ ಬೀರಂತಬೈಲ್, ದಯಾನಂದ ಕೊಳ್ಕೆಬೈಲ್ ಪ್ರೇಮಾ ಪುರಂದರ, ಸವಿತಾ ಕಿಶೋರ್, ಶ್ರೀಲತಾ ಟೀಚರ್, ಅದಿತಿ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು
ಶ್ರೀ ಜನ್ಮಾಷ್ಟಮಿ ಮಹೋತ್ಸವವನ್ನು ಕೃಷ್ಣ ರಾಧೆ ವೇಷ ಹಾಗೂ ವಿವಿಧ ಆಟೋಟ ಸ್ಪರ್ಧೆಯೊಂದಿಗೆ ನಡೆಸಲು ಸಭೆಯಲ್ಲಿ ತೀರ್ಮನಿಸಲಾಯಿತು.

