ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ಸೇವಾ ಸಮಿತಿ ಮತ್ತು ಮಾತೃ ಸಮಿತಿಯ ಆಶ್ರಯದಲ್ಲಿ ಆ. 28 ರಂದು ವರಮಹಾಲಕ್ಷ್ಮಿ ಹಬ್ಬ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರಗಲಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಆಮಂತ್ರಣ ಪತ್ರಿಕೆ ಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು. ಅರ್ಚಕ ಶಿವರಾಂ ಭಟ್ ವಿಶೇಷ ಪ್ರಾರ್ಥನೆ ಮಾಡಿದರು.
ಮೊಕ್ತೇಸರ ಜಗನ್ನಾಥ ರೈ ಪೆರಡಾಲ ಗುತ್ತು, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ, ಮಾಜಿ ಮೊಕ್ತೇಸರ ಚಂದ್ರಹಾಸ ರೈ ಪೆರಡಾಲ ಗುತ್ತು,, ಭಾಸ್ಕರ ಪಂಜಿತ್ತಡ್ಕ, ಸತೀಶ್ ಕುಮಾರ್ ಪುದ್ಯೋಡು, ಮಾತೃ ಸಮಿತಿ ಅಧ್ಯಕ್ಷೆ ವಿನಯ ಜೆ. ರೈ, ಮಾತೃ ಸಮಿತಿ ಪದಾಧಿಕಾರಿಗಳಾದ ಸೌಮ್ಯ ರವಿ ಪಟ್ಟಾಜೆ, ಹೇಮಾವತಿ ಬಂಗೇರ ಮುರಿಯಂಕೋಡ್ಲು, ಸುಜಾತಾ ಪಂಜಿತ್ತಡ್ಕ, ಸೇವಾ ಸಮಿತಿ ಸದಸ್ಯರು, ಶಿವ ಶಕ್ತಿ ಪದಾಧಿಕಾರಿಗಳು ಸದಸ್ಯರು, ಸಿಬ್ಬಂದಿ ವರ್ಗ, ಭಕ್ತರು ಉಪಸ್ಥಿತರಿದ್ದರು.

.jpg)
