HEALTH TIPS

ಸಿಂಧೂ ಜಲ ಒಪ್ಪಂದ ಅಮಾನತು ಮಾಡಿರುವ ಭಾರತದ ಕ್ರಮವನ್ನು ಒಪ್ಪುವುದಿಲ್ಲ: ಪಾಕಿಸ್ತಾನ

 ಇಸ್ಲಾಮಾಬಾದ್: 'ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಿರುವ ಭಾರತದ ಕ್ರಮವನ್ನು ಪಾಕಿಸ್ತಾನ ಒಪ್ಪುವುದಿಲ್ಲ' ಎಂದು ಪಾಕಿಸ್ತಾನ ಉಪ ಪ್ರಧಾನಿ ಇಶಾಕ್‌ ಡಾರ್ ಮಂಗಳವಾರ ಹೇಳಿದ್ದಾರೆ. 


'ಈ ಒಪ್ಪಂದವು ಈಗಲೂ ಕ್ರಮಬದ್ಧವಾಗಿದ್ದು, ಜಾರಿಯಲ್ಲಿಯೂ ಇದೆ. ಇದಕ್ಕೆ ಎರಡೂ ದೇಶಗಳು ಬದ್ಧವಾಗಿರಬೇಕು' ಎಂದೂ ಅವರು ಹೇಳಿದ್ದಾರೆ.

ಸಿಂಧೂ ಜಲ ಒಪ್ಪಂದ ಕುರಿತು ಇಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

'ಭಾರತ ಅಥವಾ ಪಾಕಿಸ್ತಾನವಾಗಲಿ ಈ ಒಪ್ಪಂದವನ್ನು ಏಕಪಕ್ಷೀಯವಾಗಿ ಅಮಾನತಿನಲ್ಲಿಡುವಂತಿಲ್ಲ. ಇಂತಹ ಅವಕಾಶಗಳನ್ನು ಒಪ್ಪಂದ ಒಳಗೊಂಡಿಲ್ಲ' ಎಂಬ ಡಾರ್‌ ಹೇಳಿಕೆ ಉಲ್ಲೇಖಿಸಿ ರೇಡಿಯೊ ಪಾಕಿಸ್ತಾನ ವರದಿ ಮಾಡಿದೆ.

ಈ ಒಪ್ಪಂದಕ್ಕೆ 1960ರಲ್ಲಿ ಉಭಯ ದೇಶಗಳು ಸಹಿ ಹಾಕಿದ್ದವು. ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದಕ್ಕೆ ಪ್ರತ್ಯುತ್ತರವಾಗಿ ಭಾರತ ಈ ಒಪ್ಪಂದವನ್ನು ಅಮಾನತನಲ್ಲಿಟ್ಟಿತ್ತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries