HEALTH TIPS

ಮಂಜೇಶ್ವರದಲ್ಲಿ ಯಶಸ್ವಿಯಾದ ಹಲಸು ಮೇಳ ಸಮಾಪ್ತಿ

ಮಂಜೇಶ್ವರ: ಪ್ರಥಮ ಬಾರಿಗೆ ಮಂಜೇಶ್ವರದಲ್ಲಿ ನಡೆದ ಹಲಸು ಮೇಳ ಯಶಸ್ವಿಯಾಗಿ ದಾಖಲೆ ಸೃಷ್ಟಿಸಿದೆ ಎಂದು ಮಂಜೇಶ್ವರ ಮರ್ಸಿ ಚರ್ಚ್‍ನ ಧರ್ಮಗುರು ಎಡ್ವಿನ್ ಫ್ರಾನ್ಸಿಸ್ ಪಿಂಟೊ ನುಡಿದರು.  


ಕಲಾಸ್ಪರ್ಷಂ ಸಭಾಂಗಣದಲ್ಲಿ ನಡೆದ ಹಲಸು ಮೇಳದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರದ ಹಲವಾರು ಸಂಘ ಸಂಸ್ಥೆಗಳ ಪ್ರಚಾರ ಹಾಗೂ ಆಯೋಜಕರ ಕಾರ್ಯ ಹಲಸುಮೇಳ ಈ ರೀತಿ ಯಶಸ್ವಿಯಾಗಲು ಕಾರ್ಯವೆಂದು ಅವರು ನುಡಿದರು. ಹೊಸಂಗಡಿ ಇನ್ಫೆಂಟ್ ಜೀಸಸ್ ಸೈರೊ ಮಲಬಾರ್ ಚರ್ಚ್‍ನ ಧರ್ಮಗುರು ಲೂಯಿಸ್ ಮರಿಯಾದಾಸ್ ಮಾತನಾಡಿದರು.


ಜಿಲ್ಲಾ ಪಂಚಾಯತಿ ಸದಸ್ಯ ಹರ್ಷಾದ್ ವರ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಪಂಚಾಯತಿ ಮಾಜಿ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೋ, ಸದಸ್ಯ ಅಬ್ದುಲ್ಲ ಗುಡ್ಡೆಕೇರಿ, ಜರೀನಾ ಬಾನು, ಮೀಂಜ ಪಂ. ಉಪಾಧ್ಯಕ್ಷೆ ಉಷಾ, ಚಿತ್ರನಟಿ ರೂಪಶ್ರೀ ವರ್ಕಾಡಿ, ಸಾಮಾಜಿಕ ಕಾರ್ಯಕರ್ತ ಕಾರ್ತಿಕ್ ಶೆಟ್ಟಿ ಮಜಿಬೈಲು ಉಪಸ್ಥಿತರಿದ್ದರು. ಆಯೋಜಕ ರತನ್ ಕುಮಾರ್ ಹೊಸಂಗಡಿ ಸ್ವಾಗತಿಸಿ, ಬೆನಕ ಈವೆಂಟ್ಸ್ ಕುಂದಾಪುರದ ಗಣೇಶ್ ಶೆಟ್ಟಿ ಪ್ರಸ್ತಾಪಿಸಿ ವಂದಿಸಿದರು. ಜಿಲ್ಲೆಯ ಹಾಗೂ ಕರ್ನಾಟಕದ ವಿವಿಧ ಕಡೆಯ ರೈತರು, ವ್ಯಾಪಾರಿಗಳು ಭಾಗವಹಿಸಿದ್ದರು. ಹಲಸಿನ ವಿವಿಧ ಆಹಾರ ಉತ್ಪನ್ನಗಳನ್ನು ಸಿದ್ಧಪಡಿಸಿ ಮಾರಾಟ ಮಾಡಲಾಗಿತ್ತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries