ಪಾಲಕ್ಕಾಡ್: ಪಾಲಕ್ಕಾಡ್ ಶ್ರೀನಿವಾಸನ್ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಮುಹಮ್ಮದ್ ಅಲಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಇಂಟರ್ ಪೋಲ್ ಸಹಾಯದಿಂದ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಪತ್ತೆ ಮಾಡಲಾಯಿತು.
ಮೂರು ತಿಂಗಳ ಕಾಲ ಅವರು ಜೆಡ್ಡಾ ಜೈಲಿನಲ್ಲಿದ್ದರು. ಆರೋಪಿಯನ್ನು ದೆಹಲಿಗೆ ಕರೆತಂದ ನಂತರ ಎನ್.ಐ.ಎ ಆತನ ಬಂಧನವನ್ನು ದಾಖಲಿಸಿದೆ. ಬಂಧಿಸಲ್ಪಟ್ಟ ಮುಹಮ್ಮದ್ ಅಲಿ, ಪಾಪ್ಯುಲರ್ ಫ್ರಂಟ್‍ನ ಪಾಲಕ್ಕಾಡ್ ಜಿಲ್ಲಾಧ್ಯಕ್ಷನಾಗಿದ್ದ. ಆರ್.ಎಸ್.ಎಸ್. ಕಾರ್ಯಕರ್ತ ಶ್ರೀನಿವಾಸನ್ ಅವರನ್ನು ಏಪ್ರಿಲ್ 16, 2022 ರಂದು ಕೊಲ್ಲಲಾಗಿತ್ತು. ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರ ಗುಂಪೆÇಂದು ಶ್ರೀನಿವಾಸನ್ ಅವರನ್ನು ಕೊಂದಿದೆ ಎಂದು ಎನ್.ಐ.ಎ. ಪ್ರಕರಣ ಹೇಳುತ್ತದೆ.
ಅಂಗಡಿಯೊಂದಕ್ಕೆ ನುಗ್ಗಿ ಶ್ರೀನಿವಾಸನ್ ಅವರನ್ನು ಕೊಚ್ಚಿ ಕೊಲ್ಲಲಾಯಿತು. ಪಾಪ್ಯುಲರ್ ಫ್ರಂಟ್ ನಾಯಕ ಜುಬೈರ್ ಅವರ ಹತ್ಯೆಗೆ ಪ್ರತೀಕಾರವಾಗಿ ಶ್ರೀನಿವಾಸನ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಕಂಡುಬಂದಿದೆ. ಘಟನೆ ನಡೆದ ದಿನ, ಮೂರು ಬೈಕ್‍ಗಳಲ್ಲಿ ಬಂದ ಜನರ ಗುಂಪೆÇಂದು ಮೇಳಮುರಿಯಲ್ಲಿರುವ ಎಸ್‍ಕೆಎಸ್ ಆಟೋಸ್ ಎಂಬ ಸಂಸ್ಥೆಗೆ ನುಗ್ಗಿ ಶ್ರೀನಿವಾಸನ್ ಅವರನ್ನು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿತು.
ಪಿಎಫ್‍ಐ ಕಾರ್ಯಕರ್ತ ಸುಬೈರ್ ಎಲಪ್ಪುಳ್ಳಿ ಅವರನ್ನು ಕಡಿದು ಕೊಲೆ ಮಾಡಿದ 24 ಗಂಟೆಗಳ ಒಳಗೆ ಶ್ರೀನಿವಾಸನ್ ಅವರನ್ನು ಕೊಲ್ಲಲಾಯಿತು. ಈ ಪ್ರಕರಣದಲ್ಲಿ ಎನ್‍ಐಎ ಮಾರ್ಚ್ 2023 ರಲ್ಲಿ ಮೊದಲ ಚಾರ್ಜ್‍ಶೀಟ್ ಮತ್ತು ಅದೇ ವರ್ಷದ ನವೆಂಬರ್‍ನಲ್ಲಿ ಎರಡನೇ ಚಾರ್ಜ್‍ಶೀಟ್ ಸಲ್ಲಿಸಿತ್ತು.

