HEALTH TIPS

ಕುಂಬ್ಡಾಜೆ ಗ್ರಾಮ ಪಂಚಾಯಿತಿ ಆರೋಗ್ಯ ಕಾರ್ಯಕರ್ತರ ಸನ್ಮಾನ, ಸ್ವಯಂಸೇವಕರಿಗೆ ತರಬೇತಿ

ಬದಿಯಡ್ಕ: ಸಾರ್ವಜನಿಕ ಆರೋಗ್ಯ ಚಟುವಟಿಕೆಗಳನ್ನು ತೀವ್ರವಾಗಿ ಅನುಷ್ಠಾನಗೊಳಿಸಲು ಪ್ರಾರಂಭಿಸಲಾದ "ವಿಷನ್ 2026' ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಮತ್ತು ಗರ್ಭಕೋಶದ ಕ್ಯಾನ್ಸರ್ ತಡೆಗಟ್ಟುವಿಕೆಯ ಭಾಗವಾಗಿ 14 ರಿಂದ 15 ವರ್ಷ ವಯಸ್ಸಿನ ಬಾಲಕಿಯರಿಗೆ ನೀಡಲಾಗುವ ಎಚ್‍ಪಿಎ ಲಸಿಕೆಯ ಶೇ.100 ವ್ಯಾಪ್ತಿಯನ್ನು ಸಾಧಿಸಿದ್ದಕ್ಕಾಗಿ ಗ್ರಾಮ ಪಂಚಾಯಿತಿ ಆಡಳಿತ ಸಮಿತಿಯು ಕುಟುಂಬ ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತರನ್ನು ಸನ್ಮಾನಿಸಿ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಯಿತು. 


ಇದರ ಜೊತೆಗೆ, ಸಾಂಕ್ರಾಮಿಕ ಮತ್ತು ಜೀವನಶೈಲಿ ರೋಗಗಳನ್ನು ತಡೆಗಟ್ಟಲು ಕೆಲಸ ಮಾಡಲು ಸಿದ್ಧರಾಗಿರುವ 140 ಆರೋಗ್ಯ ಸ್ವಯಂಸೇವಕರಿಗೆ ತರಬೇತಿ ನೀಡಲಾಯಿತು. ಕುಂಬ್ಡಾಜೆ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರಿಯಾಂಕಾ ಎ.ಸಿ. ಅವರ ಅಧ್ಯಕ್ಷತೆಯಲ್ಲಿ ಮಾರ್ಪನಡ್ಕದ ಪಾಂಚಜನ್ಯಂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಪಂಚಾಯಿತಿ ಅಧ್ಯಕ್ಷೆ ಯಶೋದಾ ಎನ್ ಉದ್ಘಾಟಿಸಿದರು. ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.  ಆರೋಗ್ಯ ನಿರೀಕ್ಷಕ  ಕೆ. ಸುರೇಶ್ ಕುಮಾರ್ ಮತ್ತು ಪಬ್ಲಿಕ್ ಹೆಲ್ತ್ ನರ್ಸ್ ಉಷಾ ಅವರು ಆರೋಗ್ಯ ಸ್ವಯಂಸೇವಕರಿಗೆ ತರಬೇತಿ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ನಯನಾ ಕುಮಾರಿ,  ಪಂಚಾಯಿತಿ ಕಲ್ಯಾಣ ಕ್ಷೇಮಕಾರ್ಯ ಸಮಿತಿಯ ಅಧ್ಯಕ್ಷ ಅಬೂಬಕರ್, ಪಂಚಾಯಿತಿ ಸದಸ್ಯ ಮಹೇಶ್ ಅಜ್ಜಿಮೂಲೆ, ಬಿ.ಟಿ. ಅಬ್ದುಲ್ಲಕುಂಞÂ್ಞ, ಎಸ್.ಮಹಮ್ಮದ್. ನೂರುದ್ದೀನ್, ಗೀತಾ, ಬಬಿತಾ ರೇಷ್ಮಾ, ಸೌಭಾಗ್ಯಲಕ್ಷ್ಮಿ ಮತ್ತು ಮಶೀದಾ ಭಾಗವಹಿಸಿದರು.  ವೈದ್ಯಾಧಿಕಾರಿ ಡಾ. ಸೈಯದ್ ಹಮೀದ್ ಶುಹೈಬ್ ಸ್ವಾಗತಿಸಿ, ಜೆಎಚ್‍ಐ ಜಿಜು ಮಾರ್ಕೋಸ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries