HEALTH TIPS

ಮಾಜಿ ಮುಖ್ಯಮಂತ್ರಿ ದಿ. ಉಮ್ಮನ್ ಚಾಂಡಿ ಸಂಸ್ಮರಣೆ ಹಾಗೂ ರಕ್ತದಾನ ಶಿಬಿರ

ಮಂಜೇಶ್ವರ: ಕೇರಳಂನ ಮಾಜಿ ಮುಖ್ಯಮಂತ್ರಿ ದಿ. ಉಮ್ಮನ್ ಚಾಂಡಿಯವರ ತೃತೀಯ ಸಂಸ್ಮರಣೆ ಹಾಗೂ ರಕ್ತದಾನ ಶಿಬಿರ ಮಜೀರ್ ಪಳ್ಳದಲ್ಲಿ ಜರಗಿತು. ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಜರಗಿದ ಸಂಸ್ಮರಣಾ ಕಾರ್ಯಕ್ರಮವನ್ನು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಸೋಮಪ್ಪ ಉದ್ಘಾಟಿಸಿದರು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಾಮೋದರ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ಹರ್ಷಾದ್ ವರ್ಕಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. 


ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷೆ ಕಮಲಾಕ್ಷಿ ಕೆ., ಮಿಂಜ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಉಷಾ ಪೂಂಜ, ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಮ್ಯ ಕೆ, ಯೂತ್ ಕಾಂಗ್ರೆಸ್ ಅಧ್ಯಕ್ಷ ಬಾತಿಷ್ ಅಹಮದ್, ವರ್ಕಾಡಿ ಮಂಡಲ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಅರಿಬೈಲು, ಪಂಚಾಯತಿ ಸದಸ್ಯ ಉಮೇಶ್ ಶೆಟ್ಟಿ ಅಸನಬೈಲು, ಮುಖಂಡರಾದ ದಿವಾಕರ ಎಸ್ ಜೆ, ಶಾಂತಾ ಆರ್. ನಾಯ್ಕ್, ಅಝೀಝ್ ಕಲ್ಲೂರು, ಮೊಹಮ್ಮದ್ ಹನೀಫ್ ಎಚ್ ಎ, ಮಮತಾ ದಿವಾಕರ್, ಸದಾಶಿವ ಕೆ, ಕಂಚಿಲ ಮೊಹಮ್ಮದ್, ಬಿ.ಕೆ.ಮೊಹಮ್ಮದ್, ಜಗದೀಶ್ ಮೂಡಂಬೈಲು, ಅಬ್ದುಲ್ ಖಾದರ್ ಹಾಜಿ ತಲೇಕಳ, ಫ್ರಾನ್ಸಿಸ್ ಡಿಸೋಜಾ, ಮೊಹಮ್ಮದ್ ಮಜಾಲ್, ವಿನೋದ್ ಕುಮಾರ್ ಪಾವೂರು, ಶೇಕ್ ಅಬ್ಬಾಸ್, ಮೊಹಮ್ಮದ್ ಕೆದಂಬಾಡಿ, ಅಬುಸಾಲಿ, ಕೀರ್ತನ್ ಶೆಟ್ಟಿ, ಮೂಸ ಧರ್ಮನಗರ, ವೇದ ನೀರೊಳಿಕೆ, ರೋನಿ ಡಿಸೋಜಾ, ರಾಮಚಂದ್ರ ಶೆಟ್ಟಿ ಬೆಜ್ಜ, ಇಮ್ತಿಯಾಜ್ ಅಹಮದ್, ಸೈತ್ ಶೆಟ್ಟಿ, ಐತಪ್ಪ, ಅಬೂಬಕ್ಕರ್ ಕಿನ್ಯಜೆ, ಗಂಗಾಧರ ಕೆ, ವಸಂತರಾಜ ಶೆಟ್ಟಿ, ಬೌತಿಸ್ ಡಿಸೋಜ, ಅದ್ರಾಮ ಕೋಳ್ಯೂರು, ಕೆ.ಎಚ್ ಅಬೂಬಕರ್, ವಸಂತ ಮಾಸ್ತರ್, ಸುಧಾಕರ ಉಜಿರೆ, ಸಿರಾಜುದ್ದೀನ್ ತಂಙಳ್, ನಫೀಸತ್ ಮಿಸ್ರಿಯಾ, ರಾಬಿಯಾ, ಇಸ್ಮಾಯಿಲ್,  ಸಿರಾಜ್ ಧರ್ಮನಗರ, ಮುಂತಾದವರು ಭಾಗವಹಿಸಿದರು.

ಮುಸ್ಲಿಂ ಲೀಗ್ ಮುಖಂಡರುಗಳಾದ ಅಬ್ದುಲ್ ಮಜೀದ್ ಬಿ.ಎ, ಇಲ್ಯಾಸ್ ತೂಮಿನಾಡು, ಅನ್ಸಾರ್ ವರ್ಕಾಡಿ, ರಜಾಕ್ ಕೆದಂಬಾಡಿ, ಬದ್ರುದ್ದೀನ್ ಪಾವೂರು, ಮುಂತಾದವರು ಶುಭ ಹಾರೈಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries