HEALTH TIPS

ಅನುವಾದದ ಮೂಲಕ ಸಾಹಿತ್ಯಕ್ಷೇತ್ರ ಸಂಪನ್ನ: ಡಾ. ಪೆರ್ಲರ ತೆಲುಗಿಗೆ ಅನುವಾದಗೊಂಡ ‘ನಾಕೂರು’ ಕೃತಿ ಬಿಡುಗಡೆಗೊಳಿಸಿ ಹರಿಕೃಷ್ಣ ಪುನರೂರು

ಮಂಗಳೂರು: ಅನುವಾದ ಕಾರ್ಯ ಸಾಹಿತ್ಯಕ್ಷೇತ್ರವನ್ನು ಶ್ರೀಮಂತಗೊಳಿಸುತ್ತದೆ. ಅನುವಾದಕ್ಕೆ ಒಳಗಾದ ಭಾಷೆ ಮತ್ತು ಅನುವಾದ ಮಾಡಲಾದ ಭಾಷೆ ಎರಡೂ ಪರಸ್ಪರ ಪೂರಕವಾಗಿ ಬೆಳೆಯುತ್ತವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಹೇಳಿದರು. 

ತೆಲುಗಿಗೆ ಅನುವಾದವಾದ ಡಾ. ವಸಂತಕುಮಾರ ಪೆರ್ಲ ಅವರ ‘ನಾಕೂರು’ ಕೃತಿಯನ್ನು ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಬಿಡುಗಡೆಗೊಳಿಸಿ ಅವರು ಮಾತಾಡಿದರು.  


ಇದೇ ಮೊದಲ ಬಾರಿ ತುಳು ಸಣ್ಣಕಥೆಗಳ ಸಂಕಲನವೊಂದು ತೆಲುಗಿಗೆ ಅನುವಾದವಾಗಿ ಹೈದರಾಬಾದ್ ನ ಪ್ರಸಿದ್ಧ ಪ್ರಕಾಶನ ಸಂಸ್ಥೆಯೊಂದರ ಮೂಲಕ ಪ್ರಕಟವಾಗಿ ಹೊರಬರುತ್ತಿದೆ. ಇದು ತುಳುವರಿಗೆ ಹೆಮ್ಮೆಯ ಸಂಗತಿ ಎಂದು ಪುನರೂರು ಹೇಳಿದರು. 

ಕೃತಿಯನ್ನು ಪರಿಚಯಿಸಿ ಮಾತಾಡಿದ ಪ್ರಸಿದ್ಧ ತೆಲುಗು ಮತ್ತು ಇಂಗ್ಲಿಷ್ ಸಾಹಿತಿ ಡಾ. ಜಿ. ಆರ್. ಕೃಷ್ಣ ಅವರು, ‘ನಾಕೂರು’ ಕೃತಿಯಲ್ಲಿ ಡಾ. ಪೆರ್ಲ ಅವರು ತುಳುನಾಡಿನ ಸಂಸ್ಕøತಿ, ಜನಜೀವನವನ್ನು ತುಂಬ ಉತ್ತಮವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಕಳೆದ ಒಂದು ಶತಮಾನದ ಕರಾವಳಿಯ ಜೀವನದ ಸಂಗತಿಗಳು ಅತ್ಯಂತ ಹತ್ತಿರದಿಂದ ಚಿತ್ರಿತವಾಗಿದೆ. ತೆಲುಗಿಗೆ ಅನುವಾದ ಮಾಡಿದ ಹೈದರಾಬಾದ್ ನ ಸಾಹಿತಿ ರಂಗನಾಥ ರಾವ್ ಅವರು ತುಳು ಸಂಸ್ಕೃತಿಯನ್ನು ವಿಶಾಲಾಂಧ್ರಕ್ಕೆ ಪರಿಚಯಿಸುವ ದೃಷ್ಟಿಯಿಂದ ಈ ಅಪರೂಪದ ಅನುವಾದ ಕಾರ್ಯ ಮಾಡಿದ್ದಾರೆ. ಅನುವಾದವಿ ತೆಲುಗಿನಲ್ಲಿ  ಉತ್ತಮವಾಗಿ ಮೂಡಿಬಂದಿದೆ ಎಂದರು. 


ಮೂಲ ಕೃತಿಕಾರರಾದ ಕವಿ - ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾಕೂರು ಎಂಬುದು ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಕುಮಾರಾಧಾರಾ ನದಿಯಲ್ಲಿರುವ ಒಂದು ಆಳ ನೀರಿನ ಗಯ. ಅದು ಈಗ ಪುಣ್ಯಕ್ಷೇತ್ರವಾಗಿದೆ. ಅದನ್ನು ಸಂಕೇತವಾಗಿ ಇಟ್ಟುಕೊಂಡು ನಾಕೂರು, ವಿಷ್ಣುಮಂಗಲ ಮುಂತಾದ ಕಥೆಗಳ ಮೂಲಕ ಕರಾವಳಿಯ ತುಳು ಜನಜೀವನ ಮತ್ತು ಸಂಸ್ಕೃತಿಯನ್ನು ಬಿಂಬಿಸಲಾಗಿದೆ ಎಂದರು.   

ತೆಲುಗು ಕವಯಿತ್ರಿ ಡಾ. ಮೈಥಿಲಿ ಮತ್ತು ಸಂಗೀತ ಕಲಾವಿದ ಆಗಮ ಪೆರ್ಲ ಅತಿಥಿಗಳಾಗಿ ಆಗಮಿಸಿದ್ದರು. ಡಾ. ಪೆರ್ಲ ಅವರು ಅತಿಥಿಗಳಿಗೆ ಗೌರವಾರ್ಪಣೆ ಮಾಡಿದರು. ಲೇಖಕ ಸದಾನಂದ ನಾರಾವಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾಡಿದರು. ಕವಯಿತ್ರಿ ಕೆ. ಶೈಲಾಕುಮಾರಿ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries