HEALTH TIPS

ಸಾಗರ ಸಂಶೋಧನೆ-ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಐಎನ್‍ಸಿಓಐಎಸ್‍ನಿಂದ ತಿಳಿಳಿಕಾ ಒಪ್ಪಂದಕ್ಕೆ ಸಹಿ

ಕಾಸರಗೋಡು: ಸಾಗರ ಸಂಶೋಧನೆಯನ್ನು ಬಲಪಡಿಸುವ ನಿಟ್ಟಿನಲ್ಲಿ, ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್ ಮತ್ತು ಹೈದರಾಬಾದ್ ಮೂಲದ 'ಇಂಡಿಯನ್ ನ್ಯಾಷನಲ್ ಸೆಂಟರ್ ಫಾರ್ ಓಷನ್ ಇನ್ಫಾರ್ಮೇಷನ್ ಸರ್ವಿಸಸ್' (ಐಎನ್‍ಸಿಓಐಎಸ್)ಮಧ್ಯೆ ತಿಳಿವಳಿಕಾ ಒಪ್ಪಂದ ಏರ್ಪಡಿಸಲಾಗಿದೆ. ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಸಿಧು ಪಿ. ಅಲ್ಗೂರ್ ಅವರ ಉಪಸ್ಥಿತಿಯಲ್ಲಿ, ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಪರವಾಗಿ ಪ್ರಭಾರ ಕುಲಸಚಿವ ಪೆÇ್ರ. ವಿ.ಬಿ. ಸಮೀರ್ ಕುಮಾರ್ ಹಾಗೂ ಐಎನ್‍ಸಿಓಐಎಸ್ ಅನ್ನು ಪ್ರತಿನಿಧೀಕರಿಸಿ ಸಂಸ್ಥೆ ನಿರ್ದೇಶಕ ಡಾ. ಟಿ.ಎಂ. ಬಾಲಕೃಷ್ಣನ್ ನಾಯರ್ ಒಪ್ಪಂದಕ್ಕೆ ಸಹಿ ಹಾಕಿದರು.   


ಒಪ್ಪಂದದನ್ವಯ, ಪೆರಿಯಾ ಕ್ಯಾಂಪಸ್‍ನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಓಪರೇಶನಲ್ ಓಶನೋಗ್ರಪಿ  ಸ್ಥಾಪಿಸಲಾಗುವುದು. ಈ ಕೇಂದ್ರವು ಸಾಗರ ವೀಕ್ಷಣೆ, ಸಂಶೋಧನೆ ಮತ್ತು ತರಬೇತಿ ಚಟುವಟಿಕೆಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಹೊಂದಿರುತ್ತದೆ. ಕಾರ್ಯಾಚರಣಾ ಸಾಗರಶಾಸ್ತ್ರ, ಸಮುದ್ರ ಜೈವಿಕ ರಸಾಯನಶಾಸ್ತ್ರ ಮತ್ತು ಹವಾಮಾನ ಅಧ್ಯಯನ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲಾಗುವುದು. ಸಾಗರಕ್ಕೆ ಸಂಬಂಧಿಸಿದ ದತ್ತಾಂಶಗಳನ್ನು ವಿಶ್ಲೇಷಿಸಲು ಹಾಗೂ ಮುನ್ಸೂಚನೆ ನೀಡುವ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಕೃತಕ ಬುದ್ಧಿಮತ್ತೆ (ಂಡಿಣiಜಿiಛಿiಚಿಟ Iಟಿಣeಟಟigeಟಿಛಿe) ಮತ್ತು ಯಂತ್ರ ಕಲಿಕೆ (ಒಚಿಛಿhiಟಿe ಐeಚಿಡಿಟಿiಟಿg) ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುವುದು.

ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಐಎನ್‍ಸಿಓಐಎಸ್ ನಲ್ಲಿ ಇಂಟರ್ನ್‍ಶಿಪ್, ಸಂಶೋಧನಾ ಯೋಜನೆಗಳು ಮತ್ತು ಪ್ರಬಂಧ ಕಾರ್ಯಗಳಿಗೆ ಅವಕಾಶ ಕಲ್ಪಿಸಲಾಗುವುದು. ಕರಾವಳಿ ಪ್ರದೇಶದ ಸಮುದಾಯದವರಿಗೆ ಪ್ರಯೋಜನಕಾರಿಯಾದ ಸಾಗರ ಸೇವೆಗಳು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳು ಮತ್ತು ವೈಜ್ಞಾನಿಕ ಉಪನ್ಯಾಸಗಳ ಜಂಟಿ ಆಯೋಜನೆ ಸೇರಿದಂತೆ ಸಹಯೋಗದ ಪ್ರಯತ್ನಗಳಿಗೆ ದಾರಿ ಮಾಡಿಕೊಡಲಿದೆ.  

ಕಾರ್ಯಕ್ರಮದಲ್ಲಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಪೆÇ್ರ. ಎ.ವಿ. ಸಿಜಿನ್ ಕುಮಾರ್,  ಪರೀಕ್ಷಾ ನಿಯಂತ್ರಕ ಡಾ. ಆರ್. ಜಯಪ್ರಕಾಶ್, ಪ್ರಭಾರಿ ಹಣಕಾಸು ಅಧಿಕಾರಿ ಡಾ. ಮಿನಿಮೋಲ್ ಎಂ.ಸಿ, ಐಎನ್‍ಸಿಓಐಎಸ್ ವಿಭಾಗ ಮುಖ್ಯಸ್ಥ ಡಾ. ಫ್ರಾನ್ಸಿಸ್ ಪಿ.ಎ ಹಾಗೂ ವಿವಿಧ ವಿಭಾಗಗಳ ಡೀನ್‍ಗಳು ಮತ್ತು ಮುಖ್ಯಸ್ಥರು ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries