ಕಾಸರಗೋಡು: ಹದಿನೇಳರ ಹರೆಯದ ವಿಕಲ ಚೇತನ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಬೇಕಲ ಠಾಣೆ ಪೆÇೀಲೀಸರು ಐವರ ವಿರುದ್ಧ ಫೆÇೀಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. ವೆಲ್ಫೇರ್ ಸಮಿತಿ ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ.
ಪಳ್ಳಿಕ್ಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿ ದೌರ್ಜನ್ಯಕ್ಕೀಡಾಗಿದ್ದು, ಆರಂಭದಲ್ಲಿ ಬಾಲಕಿಗೆ ಆಟೋ ಚಾಲಕನೊಬ್ಬ ಕಿರುಕುಳ ನೀಡಿದ್ದು, ಅನಂತರ ಈ ಚಾಲಕನ ಸ್ನೇಹಿತ ಸೇರಿದಂತೆ ಇತರ ನಾಲ್ಕು ಮಂದಿ ದೌರ್ಜನ್ಯವೆಸಗಿರುವುದಾಗಿ ಬಾಲಕಿ ದೂರಿದ್ದಾಳೆ. ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮಾಹಿತಿಯನ್ನು ಚೈಲ್ಡ್ ವೆಲ್ಫೇರ್ ಸಮಿತಿಗೆ ತಿಳಿಸಲಾಗಿತ್ತು. ಸಮಿತಿ ನೇತೃತ್ವದಲ್ಲಿ ಇತ್ತೀಚೆಗೆ ಬಾಲಕಿಯನ್ನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಕಿರುಕುಳ ನೀಡಿರುವ ಮಾಹಿತಿ ಲಭಿಸಿದೆ. ಈ ಬಗ್ಗೆ ವರದಿ ಲಭಿಸಿದ ಬಳಿಕ ಬೇಕಲ ಠಾಣೆ ಪೆÇಲೀಸರು 5 ಪೆÇೀಕ್ಸೋ ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಹಚ್ಚುವ ನಿಟ್ಟಿನಲ್ಲಿ ಕಿರುಕುಳಕ್ಕೊಳಗಾದ ಬಾಲಕಿಯಿಂದ ಸಮಗ್ರ ಹೇಳಿಕೆ ದಾಖಲಿಸಿಕೊಳ್ಳಲು ಪೆÇಲೀಸರು ತೀರ್ಮಾನಿಸಿದ್ದಾರೆ.

