HEALTH TIPS

ಕಂಚಿಕಟ್ಟೆ ಸೇತುವೆ ಬಳಿ ಗುಡ್ಡೆ ಕುಸಿತ ಭೀತಿ: ಪ್ರಯಾಣಿಕರು ಆತಂಕದಲ್ಲಿ


ಕುಂಬಳೆ
: ಅಪಘಾತ ಬೆದರಿಕೆ ಎದುರಿಸುವ ಕಂಚಿಕಟ್ಟೆ ಸೇತುವೆ ಬಳಿ ರಸ್ತೆ ಹಾನಿಗೊಳ್ಳುವ ಸ್ಥಿತಿಗೆ ತಲುಪಿದೆಯೆಂದು ಸ್ಥಳೀಯರು ಮುನ್ನೆಚ್ಚರಿಕೆ ನೀಡಿದ್ದಾರೆ. ಸೇತುವೆಯಿಂದ 250 ಮೀಟರ್ನಷ್ಟು ದೂರದಲ್ಲಿ ರಸ್ತೆಗೆ ಹೊಂದಿಕೊಂಡು ಕಲ್ಲಿನ ಗೋಡೆ ಆಂಶಿಕವಾಗಿ ಕುಸಿದು ನಿಂತಿದೆ. ರಸ್ತೆಗೆ ಹೊಂದಿಕೊಂಡು ಬೆಳೆಯುವ ಮರದ ಬುಡದ ಬಳಿಯಲ್ಲೇ ಕಲ್ಲು ಬಿರುಕು ಬಿಟ್ಟು ಕೆಳಗೆ ಬಿದ್ದಿದೆ. ಇನ್ನು ಕೂಡ ಈ ರೀತಿ ಮುಂದುವರಿದರೆ ಮರ ಹಾಗೂ ಅದರೊಂದಿಗಿರುವ ಕಲ್ಲಿನ ಗೋಡೆ ರಸ್ತೆಗೆ ಬೀಳುವ ಸ್ಥಿತಿಯಿದೆಯೆಂದು ಪ್ರಯಾಣಿಕರು ತಿಳಿಸುತ್ತಾರೆ. ಈ ಹಿನ್ನೆಲೆಯಲ್ಲಿ ಈ ದಾರಿಯಾಗಿ ಸಂಚಾರವೇ ಭೀತಿದಾಯಕವಾಗಿವೆ. ದಿನಂಪ್ರತಿ ನೂರಾರು ವಾಹನಗಳು ಈ ರಸ್ತೆ ಮೂಲಕ ಸಂಚರಿಸುತ್ತಿವೆ. ಕಂಚಿಕಟ್ಟೆ ಸೇತುವೆ ಕುಸಿಯುವ ಭೀತಿ ಎದುರಿಸುತ್ತಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಆ ಮೂಲಕವಾಗಿ ಸಾಗುತ್ತಿದ್ದ ಖಾಸಗಿ ಬಸ್ಗಳ ಪರವಾನಗಿ ವರ್ಷಗಳ ಹಿಂದೆ ರದ್ದುಗೊಳಿಸಲಾಗಿತ್ತು. ದೊಡ್ಡ ವಾಹನಗಳಿಗೆ ಈ ರಸ್ತೆ ಮೂಲಕ ಸಂಚಾರ ನಿಷೇಧಿಸಲಾಗಿತ್ತು. ಹೊಸ ಸೇತುವೆ ನಿರ್ಮಿಸಲು 72 ಕೋಟಿ ರೂ.ಗಳ ಯೋಜನೆಯ ನಿರ್ದೇಶ ಉಂಟಾಗಿದ್ದರೂ ಅದಕ್ಕಿರುವ ಕ್ರಮ ನಿಧಾನಗತಿಯಲ್ಲಿ ಸಾಗುತ್ತಿದೆಯೆಂದು ಸ್ಥಳೀಯರು ಆರೋಪಿಸಿದ್ದಾರೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries