ಕಾಸರಗೋಡು: ಯುವಸಮುದಾಯವನ್ನು ಸುಸಂಸ್ಕøತರನ್ನಾಗಿಸುವುದರ ಜತೆಗೆ ರಾಷ್ಟ್ರೀಯ ಚಿಂತನೆಯನ್ನು ಬೆಳೆಸುವಲ್ಲಿ ಬಾಲಗೋಕುಲದ ಪಾತ್ರ ಮಹ್ವದ್ದಾಗಿದೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ. ಅವರು ವಿದ್ಯಾನಗರದ ಚಿನ್ಮಯ ತೇಜಸ್ ಸಭಾಂಗಣದಲ್ಲಿ ನಡೆಯುತ್ತಿರುವ ಬಾಲಗೋಕುಲಂ ಉತ್ತರ ಕೇರಳ ರಾಜ್ಯ ವಾರ್ಷಿಕ ಸಮ್ಮೇಳನದ ಎರಡನೇ ದಿನವಾದ ಶನಿವಾರ ಕಾರ್ಯಕರ್ತರ ಅಭ್ಯಾಸವರ್ಗ ಉದ್ಘಾಟಿಸಿ ಆಶೀರ್ವಚನ ನೀಡಿದರು.
ದೇಶದ ಯುವ ಸಮೂಹ ರಾಷ್ಟ್ರೀಯತೆಯಿಂದ ವಿಮುಖರನ್ನಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಎಳೆವೆಯಿಂದಲೇ ಮಕ್ಕಳಿಗೆ ಪುರಾಣ, ಸಂಸ್ಕøತಿಯ ಬಗ್ಗೆ ಅರಿವುಮೂಡಿಸುವ ಮೂಲಕ ಸಂಸ್ಕøತಿಸಂಪನ್ನ ಯುವ ಸಮೂಹವನ್ನು ನಿರ್ಮಿಸಲುಸಾಧ್ಯ. ಬಾಲಗೋಕುಲದ ಚಟುವಟಿಕೆ ಮತ್ತಷ್ಟು ವಿಸ್ತಾರಗೊಳ್ಳಲಿ ಎಂದು ಹಾರೈಸಿದರು. ಉತ್ತರ ಕೇರಳ ಸಮಿತಿಯ ಅಧ್ಯಕ್ಷ ಎಂ.ಸತ್ಯನ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ಎಂ.ರಾಧಾಕೃಷ್ಣನ್ 'ನವ ಯುಗದ ಸಂಘಟಕ'ಎಂಬ ವಿಷಯದ ಬಗ್ಗೆ ಮಾತನಾಡಿದರು.
ಜಿಲ್ಲಾ ಬಾಲಗೋಕುಲ ಸಮಿತಿ ಕಾರ್ಯದರ್ಶಿ ಅರವಿಂದ, ರಾಜ್ಯ ಕಾರ್ಯದರ್ಶಿ ಕೆ.ಎನ್ ಸಜಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಎನ್.ಎಂ ಸದಾನಂದನ್ ಸ್ವಾಗತಿಸಿದರು. ಕಂದಾಯ ಜಿಲ್ಲಾ ಕಾರ್ಯದರ್ಶಿ ಎಂ.ಟಿ ವಿದ್ಯಾಧರನ್ ವಂದಿಸಿದರು.
ಶುಕ್ರವಾರ ನಡೆದ ಗೋಕುಲ ಜಿಲ್ಲಾ ಸಂಪೂರ್ಣ ಸಮಿತಿ ಸಭೆಯನ್ನು ಕೆ. ಗೋವಿಂದನ್ ಕುಟ್ಟಿ ಉದ್ಘಾಟಿಸಿದರು. 12ರಂದುಬೆಳಗ್ಗೆ7.30ರಿಂದ ಗೋಕುಲ ಜಿಲ್ಲಾ ಸಂಪೂರ್ಣ ಸಮಿತಿ ಸಭೆ ನಡೆಯಲಿರುವುದು. 10ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಕೇಂದ್ರ ಇಂಧನ ಖಾತೆರಾಜ್ಯ ಸಚಿವ ಶ್ರೀಪಾದ ಯಸ್ಸೋ ನಾಯ್ಕ್ ಉದ್ಘಾಟಿಸುವರು. ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡುವರು. ಉತ್ತರ ಕೇರಳ ಸಮಿತಿಯ ಅಧ್ಯಕ್ಷ ಎಂ.ಸತ್ಯನ್ ಅಧ್ಯಕ್ಷತೆ ವಹಿಸುವರು. ರಾಜ್ಯಸಭಾ ಸದಸ್ಯ ಸದಾನಂದ ಮಾಸ್ಟರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಧ್ಯಾಹ್ನ 12ಕ್ಕೆ ನಡೆಯುವ ಪ್ರತಿನಿಧಿ ಸಮ್ಮೇಳನದಲ್ಲಿ ಪಿ.ಎಂ ಶ್ರೀಧರನ್ ಮಾಸ್ಟರ್ ಅಧ್ಯಕ್ಷತೆ ವಹಿಸುವರು. ನಂತರ ವಾರ್ಷಿಕ ಯೋಜನೆ, ಪದಾಧಿಕಾರಿಗಳ ಘೋಷಣೆ, ಸಮಾರೋಪಭಾಷಣ, ಧ್ವಜಾವರೋಹಣ ನಡೆಯುವುದು.


