HEALTH TIPS

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಸಿಬಿಐ ಚಾರ್ಜ್‌ಶೀಟ್ ಸ್ವೀಕರಿಸಿದ ವಿಶೇಷ ಕೋರ್ಟ್

ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧಿತ ಪ್ರಕರಣಗಳ ತುರ್ತು ವಿಲೇವಾರಿಗೆ ರಚಿಸಲಾಗಿರುವ ತ್ವರಿತಗತಿ ನ್ಯಾಯಾಲಯವು ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಸಿಬಿಐ ಸಿದ್ಧಪಡಿಸಿರುವ ದೋಷಾರೋಪಣಾ ಪಟ್ಟಿಯನ್ನು ಬುಧವಾರ ಸ್ವೀಕರಿಸಿದೆ.  


ಪರೀಕ್ಷಾ ಅಕ್ರಮ ಸಂಬಂಧಿತ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ಕೋರ್ಟ್‌ ಸ್ಥಾಪಿಸಲಾಗಿದೆ.

13 ಆರೋಪಿಗಳ ವಿರುದ್ಧದ ದೋಷಾರೋಪ ಪಟ್ಟಿಯನ್ನು ಮಂಗಳವಾರ ಸಿಬಿಐ ಸಲ್ಲಿಸಿತ್ತು. ನ್ಯಾಯಾಧೀಶ ಅನು ಗ್ರೋವರ್‌ ಬಾಳಿಗ ಅವರು ಬುಧವಾರ ಇದನ್ನು ಸ್ವೀಕರಿಸಿ, ಹೆಚ್ಚುವರಿ ಸೇರ್ಪಡೆಗೂ ಅವಕಾಶ ಕಲ್ಪಿಸಿದರು.

'ಸುಮಾರು 20,000 ಪುಟಗಳನ್ನು ಪರಿಶೀಲಿಸಿದ್ದು, ಮೂರು ದಿನಗಳಲ್ಲಿ ಸಲ್ಲಿಸುತ್ತೇವೆ' ಎಂದು ಸಿಬಿಐ ಇದೇ ವೇಳೆ ತಿಳಿಸಿತು.

ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಆಗಸ್ಟ್ 3ಕ್ಕೆ ಮುಂದೂಡಿದರು.

ಮೂವರು ಪ್ರಶ್ನೆ ಪತ್ರಿಕೆ ತಯಾರಕರು, ಕೋಚಿಂಗ್ ಸೆಂಟರ್‌ನ ಇಬ್ಬರು, ಮಧ್ಯವರ್ತಿ ಮತ್ತು ಕೆಲ ಲಾಭಾರ್ಥಿ ಅಭ್ಯರ್ಥಿಗಳನ್ನು ಆರೋಪಿಗಳನ್ನಾಗಿ ಸಿಬಿಐ ಉಲ್ಲೇಖಿಸಿದೆ. ಅಪರಾಧದ ಸಂಚು, ವಂಚನೆ, ವಿಶ್ವಾಸದ್ರೋಹ, ಸಾಕ್ಷ್ಯನಾಶ ಮತ್ತಿತರೆ ಆರೋಪಗಳನ್ನು ಇವರ ಮೇಲೆ ಹೊರಿಸಲಾಗಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries