HEALTH TIPS

ಬಾಲಗೋಕುಲ ಉತ್ತರ ಕೇರಳ ರಾಜ್ಯ ವಾರ್ಷಿಕ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಬದಿಯಡ್ಕ: ಬಾಲಗೋಕುಲ ಉತ್ತರ ಕೇರಳಂ ಇದರ ರಾಜ್ಯ ವಾರ್ಷಿಕ ಸಮ್ಮೇಳನದ  ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಮಂಗಳವಾರ ಬಿಡುಗಡೆಗೊಳಿಸಿದರು. ಜುಲೈ  10 ರಿಂದ 13ರ ವರೆಗೆ ಕಾಸರಗೋಡು ವಿದ್ಯಾನಗರ ಚಿನ್ಮಯ ತೇಜಸ್ ಆಡಿಟೋರಿಯಂನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಕೇಂದ್ರ ಸಚಿವ ಶ್ರೀಪಾದ್ ಯಶೋ ನಾಯ್ಕ್, ರಾಜ್ಯಸಭಾ ಸದಸ್ಯ ಸಿ.ಸದಾನಂದನ್ ಮಾಸ್ತರ್ ಸಹಿತ ಹಲವರು ಗಣ್ಯರು ಭಾಗವಹಿಸುವರು. 


ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದ ಸ್ವಾಮೀಜಿಯವರು ಮಕ್ಕಳಲ್ಲಿ ಆರ್ಷಜ್ಞಾನ ಹಾಗೂ ದೇಶಪ್ರೇಮವನ್ನು ಬೆಳೆಸುವ, ಸಮಾಜಪರಿವರ್ತನೆಯ ಧ್ಯೇಯದೊಂದಿಗೆ ಕಾರ್ಯವೆಸಗು ತ್ತಿರುವ ಬಾಲ ಗೋಕುಲದ ಬೃಹತ್ ಸಮ್ಮೇಳನಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬಾಲಗೋಕುಲದ ಜಿಲ್ಲಾ ರಕ್ಷಾಧಿಕಾರಿ ಜಯರಾಮ ಶೆಟ್ಟಿ, ಜಿಲ್ಲಾಧ್ಯಕ್ಷ ದಿನೇಶ್ ಮಾಸ್ತರ್, ಜಿಲ್ಲಾ ಕಾರ್ಯದರ್ಶಿ ರಾಜೇಂದ್ರ ಮವ್ವಾರು,ಕಂದಾಯ ಜಿಲ್ಲಾ ಅಧ್ಯಕ್ಷ ನಾರಾಯಣನ್ ಮಾಸ್ತರ್, ಬದಿಯಡ್ಕ ತಾಲೂಕು ರಕ್ಷಾಧಿಕಾರಿ ಜಯರಾಮ ಚೆಟ್ಟಿಯಾರ್, ಸಮನ್ವಯಸಮಿತಿ ಅಧ್ಯಕ್ಷ ನ್ಯಾಯ ವಾದಿ ಗಣೇಶ್, ಕಾಸರಗೋಡು ತಾಲೂಕು  ಕಾರ್ಯದರ್ಶಿ ಹರ್ಷರಾಜ್, ಸಹಕಾರ್ಯದರ್ಶಿ ರಾಜೇಶ್ ಪಕಳ, ಪ್ರಚಾರ ಸಮಿತಿ ಸಂಚಾಲಕ ರವೀಂದ್ರ ರೈ ಕಜೆ, ಪೈಕ ಮಂಡಲ ರಕ್ಷಾಧಿಕಾರಿ ಕುಂಞಂಬು ಮಾಸ್ತರ್, ಅಧ್ಯಕ್ಷ ಕುಮಾರನ್, ಮೊಗ್ರಾಲ್ ಪುತ್ತೂರು ಮಂಡಲ ಅಧ್ಯಕ್ಷ  ಚಂದ್ರಶೇಖರನ್, ಜಿಲ್ಲಾ ಕೋಶಾಧಿಕಾರಿ ನಟರಾಜ ಕಲ್ಲಕಳಂಬಿ, ಕುಂಬ್ಡಾಜೆ ಮಂಡಲ ಅಧ್ಯಕ್ಷ ಸೀತಾರಾಮ ಭಟ್ ಮೊದಲಾದವರು ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries