HEALTH TIPS

ಪ್ರತಿ ಮಲಯಾಳಿ ಕುಟುಂಬಕ್ಕೂ ಅವರ ಧ್ವನಿ ಪರಿಚಿತ:ಜಾನಕಿ ನಿಧನಕ್ಕೆ ವಿ.ಡಿ. ಸತೀಶನ್ ಸಂತಾಪ

 ‌ತಿರುವನಂತಪುರ: ಖ್ಯಾತ ಬಹುಭಾಷಾ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ನಿಧನಕ್ಕೆ ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಶನಿವಾರ ಸಂತಾಪ ಸೂಚಿಸಿದ್ದಾರೆ. ದಕ್ಷಿಣ ಭಾರತದ ಚಲನಚಿತ್ರ ಸಂಗೀತ ಲೋಕದ ಶ್ರೇಷ್ಠ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದ ಅವರ ಹಾಡುಗಳು ತಲೆಮಾರುಗಳು ಕಳೆದರೂ ಜನರ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಲೇ ಇರುತ್ತವೆ ಎಂದು ಬಣ್ಣಿಸಿದ್ದಾರೆ.


ಜಾನಕಿ ಅವರ ಧ್ವನಿಗೆ ಭಕ್ತಿ, ಪ್ರೀತಿ, ಸಂತೋಷ ಮತ್ತು ದುಃಖ ಸೇರಿದಂತೆ ಮಾನವ ಭಾವನೆಗಳನ್ನು ಅಪಾರ ಆಳ ಮತ್ತು ಸೊಬಗಿನಿಂದ ವ್ಯಕ್ತಪಡಿಸುವ ಸಾಮರ್ಥ್ಯವಿತ್ತು ಎಂದು ಸತೀಶನ್‌ ಸಂತಾಪ ಸಂದೇಶದಲ್ಲಿ ಬರೆದುಕೊಂಡಿದ್ದಾರೆ.

ಮಲಯಾಳಂ ಅವರ ಮಾತೃಭಾಷೆಯಲ್ಲದಿದ್ದರೂ, ಪ್ರತಿಯೊಂದು ಹಾಡನ್ನು ಅತ್ಯಂತ ಸ್ಪಷ್ಟವಾದ ಉಚ್ಚಾರಣೆ ಮತ್ತು ತುಂಬು ಭಾವನೆಯಿಂದ ಹಾಡುತ್ತಿದ್ದರು. ಇದೇ ಕಾರಣಕ್ಕೆ ಅವರ ಹಾಡುಗಳು ಪ್ರತಿಯೊಬ್ಬ ಮಲಯಾಳಿ ಜನರ ಜೀವನದ ಪ್ರಮುಖ ಭಾಗವಾಗಿದ್ದವು ಅವರು ಸ್ಮರಿಸಿದ್ದಾರೆ.

ಭಾರತೀಯ ಚಿತ್ರರಂಗಕ್ಕೆ ಜಾನಕಿ ಅವರು ನೀಡಿದ ಕೊಡುಗೆ ಅಪಾರ. ಸುಮಾರು ಆರು ದಶಕಗಳಿಗೂ ಹೆಚ್ಚು ತಮ್ಮ ಧ್ವನಿಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದರು. ಅಷ್ಟೇ ಅಲ್ಲದೇ, ಸಂಗೀತ ನಿರ್ದೇಶಕರು ಅವರ ಮೇಲಿಟ್ಟಿದ್ದ ನಿರೀಕ್ಷೆಗಿಂತಲೂ ಮಿಗಿಲಾಗಿ ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದರು. ಜಾನಕಿ ಅವರು ಕೇವಲ ಒಬ್ಬ ಹಿನ್ನೆಲೆ ಗಾಯಕಿಯಾಗಿರದೆ, ತಮ್ಮ ಹಾಡುಗಳ ಮೂಲಕ ಪ್ರತಿಯೊಬ್ಬ ಮಲಯಾಳಿಯ ಮನೆಯ ಸದಸ್ಯರಂತಾಗಿದ್ದರು ಎಂದು ಸಿಎಂ ಶ್ಲಾಘಿಸಿದ್ದಾರೆ.

ಜಾನಕಿ ಅವರು ತಮ್ಮ ನೆಚ್ಚಿನ ಗಾಯಕಿ ಎಂದು ಸಿಎಂ ಸತೀಶನ್, ಅವರ ಸೂಪರ್ ಹಿಟ್ ಮಲಯಾಳಂ ಹಾಡುಗಳಾದ ಮಲರೇ ತೇನ್ ಮಲರೇ, ತುಂಬಿ ವಾ, ಆಡಿ ವಾ ಕಾಟೇ ಮತ್ತು ನಿರಂಗಳ್ ತಾನ್ ನೃತ್ಯಂ ಹಾಡುಗಳನ್ನು ನೆನಪಿಸಿಕೊಂಡರು.

‌ಜಾನಕಿ ಅವರ ಹಾಡುಗಳು ಕಾಲವನ್ನೂ ಮೀರಿ ನಿಲ್ಲುವ ಒಂದು ಅಮೂಲ್ಯವಾದ ನಿಧಿ. ಮಲಯಾಳಿಗಳು ದಿನನಿತ್ಯದ ಜೀವನದಲ್ಲಿ ಅವರ ಯಾವುದಾದರೊಂದು ಮಧುರವಾದ ಹಾಡನ್ನು ನೆನಪಿಸಿಕೊಳ್ಳದ ದಿನವೇ ಇಲ್ಲ ಎಂದೂ ಸಿಎಂ ಹೇಳಿದ್ದಾರೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಜಾನಕಿ (88) ಅವರು ಶನಿವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಜಾನಕಿ ಅವರು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ 20ಕ್ಕೂ ಹೆಚ್ಚು ಭಾಷೆಗಳಲ್ಲಿ 48,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ನರೇಂದ್ರ ಮೋದಿ, ಪ್ರಧಾನ ಮಂತ್ರಿಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅಮ್ಮನವರ ನಿಧನವು ಸಂಗೀತ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ. ವಿವಿಧ ಭಾಷೆಗಳಲ್ಲಿರುವ ಅವರ ಹಾಡುಗಳು ಪ್ರತಿಯೊಂದು ಭಾವನೆಯನ್ನೂ ತುಂಬು ಮನಸ್ಸಿನಿಂದ ವ್ಯಕ್ತಪಡಿಸುತ್ತಿದ್ದವು. ಅವರ ಮಧುರವಾದ ಹಾಡುಗಳು ಮುಂದೆಯೂ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಲೇ ಇರುತ್ತವೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ನನ್ನ ಸಂತಾಪಗಳು







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries