ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ಅವರು, 'S I R ಅರ್ಜಿ ಸಲ್ಲಿಸುವಾಗ ಹಲವು ಹಂತಗಳಲ್ಲಿ ಅನಗತ್ಯ ತೊಂದರೆ ಎದುರಾಯಿತು.
ಈ ವ್ಯವಸ್ಥೆಯನ್ನು ಬಳಕೆದಾರರ ಅನುಕೂಲಕ್ಕಿಂತ ಕಿರಿಕಿರಿಯಾಗುವಂತೆ ರೂಪಿಸಿರುವ ಭಾವನೆ ಮೂಡುತ್ತದೆ' ಎಂದು ಹೇಳಿದ್ದಾರೆ.
'ನನ್ನ ಬಳಿ 2002ರಿಂದಲೂ ಅದೇ EPIC (ಮತದಾರರ ಗುರುತಿನ ಚೀಟಿ) ಸಂಖ್ಯೆ ಇದೆ. ಅದು ಈಗಲೂ ಮಾನ್ಯವಾಗಿದೆ. ಹಲವು ವರ್ಷಗಳಿಂದ ನನ್ನ ಮತದಾರರ ವಿವರಗಳನ್ನು ನವೀಕರಿಸುತ್ತಲೇ ಬಂದಿದ್ದೇನೆ. ಆದರೂ, ಅರ್ಜಿ ಸಲ್ಲಿಸುವಾಗ 2002ರ ಮತದಾರರ ಪಟ್ಟಿಯಲ್ಲಿ ನನ್ನ ಹೆಸರನ್ನು ಹುಡುಕುವಂತೆ ಸೂಚಿಸಲಾಯಿತು. ಆದರೆ ಆ ಪಟ್ಟಿಯಲ್ಲಿ ನನ್ನ ಹೆಸರು ಇರಲಿಲ್ಲ. ನನ್ನ ಹೆಸರು ನಂತರದ ಪರಿಷ್ಕರಣೆಯಲ್ಲಿ ಸೇರ್ಪಡೆಯಾಗಿರಬಹುದು. ಈ ಮಾಹಿತಿಯನ್ನು ಚುನಾವಣಾ ಆಯೋಗದ ವ್ಯವಸ್ಥೆಯೇ ಗುರುತಿಸಿ, ಅದಕ್ಕೆ ತಕ್ಕಂತೆ ಮಾರ್ಗದರ್ಶನ ನೀಡಬೇಕಾಗಿತ್ತು' ಎಂದು ಅವರು ಹೇಳಿದ್ದಾರೆ.
ಅರ್ಜಿ ಪ್ರಕ್ರಿಯೆಯಲ್ಲಿ ಪೋಷಕರಲ್ಲಿ ಒಬ್ಬರ ವಿವರವನ್ನು ಜೋಡಿಸುವುದೂ ಕಷ್ಟಕರವಾಗಿತ್ತು. ತಮ್ಮ ತಂದೆಯ ನೆನಪಿನ ಶಕ್ತಿಯ ಆಧಾರದಿಂದ ಮತದಾರರ ಪಟ್ಟಿಯ ಭಾಗ (ಪಾರ್ಟ್) ಸಂಖ್ಯೆಯನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಹುಡುಕಾಟದ ಡ್ರಾಪ್‌ಡೌನ್ ನಲ್ಲಿ ಮತಗಟ್ಟೆಯ ವಿಳಾಸ ಯಾವಾಗಲೂ ಕಾಣಿಸದ ಕಾರಣ, ಈ ಮಾಹಿತಿ ಮೊದಲೇ ಗೊತ್ತಿರಬೇಕು ಎಂದು ಅವರು ಹೇಳಿದ್ದಾರೆ.
ಅರ್ಜಿ ಸಲ್ಲಿಸಿದ ಬಳಿಕದ ಪ್ರಕ್ರಿಯೆಯಲ್ಲಿಯೂ ಸ್ಪಷ್ಟತೆ ಇಲ್ಲ. ಇ-ಸಹಿ ಮಾಡಿದ ಬಳಿಕ ಪರದೆಯ ಮೇಲೆ ಸ್ವೀಕೃತಿ ಸಂದೇಶ ಕಾಣಿಸುತ್ತದೆ. ನಂತರ SMS ಬರುತ್ತದೆ. ಆದರೆ ಅದರಲ್ಲಿ ಸ್ವೀಕೃತಿ ಸಂಖ್ಯೆ ಅಥವಾ ಅರ್ಜಿಯ ಸ್ಥಿತಿಯನ್ನು ಹೇಗೆ ಪರಿಶೀಲಿಸಬೇಕು ಎಂಬ ಮಾಹಿತಿ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
'ತಾಂತ್ರಿಕ ಜ್ಞಾನ ಹೊಂದಿರುವ ನನಗೇ ಅರ್ಜಿ ಸಲ್ಲಿಸಲು ಸಾಕಷ್ಟು ಸಮಯ ಮತ್ತು ಶ್ರಮ ಬೇಕಾಯಿತು. ತಂತ್ರಜ್ಞಾನದ ಬಳಕೆಯಲ್ಲಿ ಅಷ್ಟಾಗಿ ಪರಿಣತಿ ಇಲ್ಲದವರು, ಹಲವು ಬಾರಿ ವಾಸಸ್ಥಳ ಬದಲಾಯಿಸಿರುವವರು ಅಥವಾ ಹಳೆಯ ಮಾಹಿತಿಯನ್ನು ನೆನಪಿಡದವರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಇನ್ನಷ್ಟು ಕಷ್ಟಕರವಾಗಬಹುದು. "ಡಿಜಿಟಲ್ ಅರೆಸ್ಟ್"ನಂತಹ ವಂಚನೆಗಳಿಗೆ ಬಲಿಯಾಗುವ ಜನರಿಗೆ ಈ ಪ್ರಕ್ರಿಯೆ ಇನ್ನಷ್ಟು ಸವಾಲಾಗಬಹುದು' ಎಂದು ಅವರು ಹೇಳಿದ್ದಾರೆ.
ಒಟ್ಟಾರೆ, ಎಸ್‌ಐಆರ್ ವೆಬ್‌ಸೈಟ್ ಇತ್ತೀಚೆಗೆ ತಾವು ಬಳಸಿದ ಅತ್ಯಂತ ಬಳಕೆದಾರ ಸ್ನೇಹಿಯಲ್ಲದ ವೆಬ್‌ಸೈಟ್‌ಗಳಲ್ಲಿ ಒಂದಾಗಿದೆ. ಈ ಮೊದಲು IRCTC ವೆಬ್‌ಸೈಟ್ ಅತ್ಯಂತ ಸಂಕೀರ್ಣವಾಗಿದೆ ಎಂದು ಭಾವಿಸಿದ್ದೆ. ಆದರೆ SIR ವೆಬ್‌ಸೈಟ್ ಅದಕ್ಕಿಂತಲೂ ಹೆಚ್ಚು ತೊಂದರೆ ಉಂಟುಮಾಡುತ್ತದೆ ಎಂದು ಅವರು ಟೀಕಿಸಿದ್ದಾರೆ.
ಮೂಲ: ತೇಜೇಶ್ ಜಿ.ಎನ್. ಅವರ ಸಾಮಾಜಿಕ ಜಾಲತಾಣದ ಪೋಸ್ಟ್ (ಜುಲೈ 9).

