ಕಾಸರಗೋಡು: ಓಣಂ ಸಂದರ್ಭದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ 100 ದಿನಗಳ ಕೆಲಸ ಪೂರ್ಣಗೊಳಿಸಿದ ಕುಟುಂಬಗಳಿಗೆ ಹಬ್ಬ ಭತ್ಯೆ ನೀಡಲಾಗಿದೆ. ಅದರಂತೆ, ಕುಟುಂಬಗಳಿಗೆ ತಲಾ 1200 ರೂ. ಲಭಿಸಲಿದೆ. ಜಿಲ್ಲೆಯಲ್ಲಿ ಒಟ್ಟು 19,569 ಕುಟುಂಬಗಳಿಗೆ ತಲಾ 1200 ರೂ.ಗಳಂತೆ ಒಟ್ಟು 2,34,82,800 ರೂ. ನೀಡಲಾಗಿದೆ ಎಂದು ಎಲ್‍ಎಸ್‍ಜಿಡಿ ಜಂಟಿ ಕಾರ್ಯಕ್ರಮ ಸಂಯೋಜಕ ಟಿ.ಟಿ. ಸುರೇಂದ್ರನ್ ತಿಳಿಸಿದ್ದಾರೆ.

