HEALTH TIPS

ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ ಗಾಝಾದ ಪೊಲೀಸ್ ಮುಖ್ಯಸ್ಥೆ ಸೇರಿ ಕನಿಷ್ಠ 10 ಮಂದಿ ಮೃತ್ಯು

ಗಾಝಾ: ಮಧ್ಯ ಗಾಝಾ ನಗರದ ಪೊಲೀಸ್ ಪ್ರಧಾನ ಕಚೇರಿಯ ಮೇಲೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಒಂಭತ್ತು ಫೆಲೆಸ್ತೀನಿನ ನಾಗರೀಕರು ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ ಎಂದು ವೈದ್ಯರು ಮತ್ತು ಪೊಲೀಸರು ಬುಧವಾರ ತಿಳಿಸಿದ್ದಾರೆ ಎಂದು ಂಟರಿಚಿzeeಡಿಚಿ ಮತ್ತು ರಾಯಿಟರ್ಸ್‌ ವರದಿ ಮಾಡಿದೆ. 


ಪೊಲೀಸ್ ಪ್ರಧಾನ ಕಚೇರಿಯಲ್ಲಿ ಮೃತಪಟ್ಟವರಲ್ಲಿ ಹಲವು ಅಧಿಕಾರಿಗಳು ಸೇರಿದ್ದಾರೆ. ಅವರಲ್ಲಿ ಕೆಲವರು ಉನ್ನತ ಹುದ್ದೆಯಲ್ಲಿದ್ದರು ತಿಳಿದು ಬಂದಿದೆ. ಮೃತರಲ್ಲಿ ಗಾಝಾದ ಮಹಿಳಾ ಪೊಲೀಸ್ ಮುಖ್ಯಸ್ಥೆ ಕರ್ನಲ್ ಫತಿನಾ ಅಲ್-ಸಹರ್ ಹಾಗೂ ಹಲವು ಪೊಲೀಸ್ ಕಮಾಂಡರ್ಗಳು ಸೇರಿದ್ದಾರೆ ಎಂದು ಫೆಲೆಸ್ತೀನಿನ ಸುದ್ದಿ ಮೂಲಗಳು ವರದಿ ಮಾಡಿವೆ.

ಇದಕ್ಕೂ ಮುನ್ನ ಮಧ್ಯ ಗಾಝಾದ ನುಸೆರಾತ್ ನಿರಾಶ್ರಿತರ ಶಿಬಿರದ ಮೇಲೆ ನಡೆದ ಪ್ರತ್ಯೇಕ ವಾಯುದಾಳಿಯಲ್ಲಿ ಒಬ್ಬ ಫೆಲೆಸ್ತೀನಿನ ನಾಗರಿಕ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದರಿಂದ ಬುಧವಾರದ ದಾಳಿಗಳಲ್ಲಿ ಮೃತಪಟ್ಟವರ ಸಂಖ್ಯೆ ಕನಿಷ್ಠ 10ಕ್ಕೆ ಏರಿದೆ.

ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವ ಸಂಸ್ಥೆಗಳನ್ನು ದುರ್ಬಲಗೊಳಿಸುವ ಉದ್ದೇಶದಿಂದ ಇಸ್ರೇಲ್ ಗಾಝಾದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಮೂಲಸೌಕರ್ಯಗಳನ್ನು ಪದೇ ಪದೇ ಗುರಿಯಾಗಿಸಿಕೊಂಡಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

2025ರ ಅಕ್ಟೋಬರ್ ನಲ್ಲಿ ಜಾರಿಗೆ ಬಂದ ಕದನ ವಿರಾಮದ ನಂತರದ ತಿಂಗಳಿನಲ್ಲೇ ಇಸ್ರೇಲ್ ದಾಳಿಗಳು ಮುಂದುವರಿದಿದ್ದು, ಪೊಲೀಸ್ ವಾಹನಗಳು, ಚೆಕ್ಪೋಸ್ಟ್ ಗಳು ಮತ್ತು ಗಸ್ತು ನಿರ್ವಹಣಾ ಘಟಕಗಳ ಮೇಲೆ ಸರಣಿ ದಾಳಿಗಳು ನಡೆದಿವೆ ಎಂದು ಅವರು ಹೇಳಿದ್ದಾರೆ.

ಮಂಗಳವಾರವೂ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಬೀಚ್ ಫ್ರಂಟ್ ಕೆಫೆಯೊಂದರಲ್ಲಿ ಒಂದು ಮಗು ಸೇರಿದಂತೆ ಕನಿಷ್ಠ ಏಳು ಫೆಲೆಸ್ತೀನಿಯನ್ನರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries